ಮೈಸೂರು: ಸಿಡಿ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಎಲ್ ಬೋರ್ಡ್ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಶಾಸಕ ರಮೇಶ ಜಾರಕಿಹೊಳಿ ಅವರು ಡಿ.ಕೆ.ಶಿವಕುಮಾರ್ ಕುರಿತಾದ ಆಡಿಯೋ ಬಿಡುಗಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ಧಗಂಗಾ ಶ್ರೀ, ಚುಂಚನಗಿರಿ ಶ್ರೀಗಳು ಸಂಸ್ಕಾರ ಕಲಿಸಿದ್ದಾರೆ. ಬಡವರಿಗೆ ಇಲ್ಲದಿದ್ದರೆ ಏನಾದರೂ ಸಹಾಯ ಮಾಡಬಹುದು, ಕೈಲಾದುದನ್ನು ಕೊಡಬಹುದು. ಸಿಡಿ ವಿಚಾರದಲ್ಲಿ ನಾನು ಎಲ್ ಬೋರ್ಡ್ ಎಂದು ಪುನರುಚ್ಚರಿಸಿದರು.
ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಅಭಿವೃದ್ಧಿ ಕುರಿತಂತೆ ಪ್ರಧಾನಿ ಮೋದಿ ಅವರಿಗೆ ಯುವಕರೊಬ್ಬರು ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಬದ್ಧರಾಗಿದ್ದೇವೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಎಷ್ಟು ವರ್ಷಗಳಿಂದ ರಥೋತ್ಸವ ನಿಂತಿತ್ತು. ನಾವು ಬಂದ ನಂತರ ಮಾಡಿಲ್ಲವೇ? ಅದೇ ರೀತಿ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: ಬಿಜೆಪಿಯಲ್ಲೇ ಕುಟುಂಬ ರಾಜಕಾರಣ ಹೆಚ್ಚು… ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆದರೆ ತಪ್ಪೇನು?