Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀನಿವಾಸ ಪ್ರಸಾದ್, ”ಸಿದ್ದರಾಮಯ್ಯ ಯಾವ ಸೀಮೆ ಯಾವ ನಾಯಕ. ಹೀನಾಯವಾಗಿ ಸೋಲಿಸಿದವನ (ಜಿ.ಟಿ.ದೇವೇಗೌಡ) ಬಳಿಯೇ ಶರಣಾಗಿದ್ದೀಯ.ಮೂಲ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಪಕ್ಷಕ್ಕೆ ಕರೆತರುತ್ತಿದ್ದೀಯ. ಅವನನ್ನೇ ನಮ್ಮ ನಾಯಕ ಅಂತ ಒಪ್ಪಿಕೊಂಡಿರುವ ನೀನು ಯಾವ ಸೀಮೆ ನಾಯಕ” ಎಂದು ವ್ಯಂಗ್ಯವಾಡಿದರು.
ಸೋತು ಸುಣ್ಣವಾಗಿರೋ ಕಾಂಗ್ರೆಸ್ಸಿಗರು ಆಡಳಿತದಲ್ಲಿದ್ದಾಗ ಏನೆಲ್ಲಾ ಮಾತನಾಡಿದರು, ಈಗ ಬಿಜೆಪಿ ವಿರುದ್ದ ಮಾತನಾಡುತ್ತಾರೆ” ಎಂದು ಕಿಡಿ ಕಾರಿದರು. ”ವಿರೋಧ ಪಕ್ಷದವರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ತಾಕತ್ತಿದ್ದರೆ, ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿ ನೋಡೋಣ. ನೀವು ಎಂದಾದರೂ ಪಕ್ಷೇತರವಾಗಿ ನಿಂತು ಗೆದ್ದಿದ್ಷೀರಾ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರಿಗೆ ಭಾಷೆ ಮೇಲೆ ಹಿಡಿತವೇ ಇಲ್ಲ. ಪ್ರಧಾನಿ ಬಗ್ಗೆ ಹಗುರ ಮಾತು, ತಾಲಿಬಾನ್ ಆಡಳಿತವನ್ನು ಹೋಲಿಸುವುದು ಇದೆಲ್ಲಾ ಎಂಥಾ ಮಾತು. ದೇಶದ ಪ್ರಧಾನಿ ಹುದ್ದೆ ಅಂದರೆ ಏನು ಅನ್ನೋದೆ ಸಿದ್ದರಾಮಯ್ಯ ಗೆ ಗೊತ್ತಿಲ್ಲ. 1984ರ ನಂತರ ಕೇಂದ್ರದಲ್ಲಿ ಸುಭದ್ರ ಸರಕಾರವೇ ಇರಲಿಲ್ಲ. ಮೋದಿ ಅವರಿಂದಾಗಿ ಕೇಂದ್ರದಲ್ಲಿ ಸುಭದ್ರ ಸರ್ಕಾರ ಬಂದಿದೆ. ಮೋದಿಯವರು ರಾಷ್ಟ್ಟ ಮಟ್ಟದ ರಾಜಕಾರಣದಲ್ಲಿ ಇರಲೇ ಇಲ್ಲ. ಅವರನ್ನು ಬಿಜೆಪಿ ಪ್ರಮೋಟ್ ಮಾಡಿ ಪ್ತಧಾನಿ ಮಾಡಿದೆ. ಅದಕ್ಕೆ ತಕ್ಕಂತೆ ಮೋದಿಯವರು ವಿಶ್ವ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹವರ ಬಗ್ಗೆ ಲಘು ಮಾತು ನಿಜಕ್ಕೂ ನನಗೆ ಬೇಸರ ಮೂಡಿಸಿದೆ” ಎಂದರು.
Related Articles
Advertisement
”ಪ್ರಜ್ವಲ್, ನಿಖಿಲ್, ಭವಾನಿ, ಅನಿತಾ ನೀವೇ ಇದ್ದರೆ ಅದನ್ನು ಪಕ್ಷ ಅನ್ನುವುದಿಲ್ಲ, ಕಂಪನಿ ಅಂತಾರೆ. ಕುಮಾರಸ್ವಾಮಿ ತಮ್ಮ ಇತಿಮಿತಿ ಅರಿತು ಮಾತನಾಡಲಿ, ಯಾವಾಗವಾದರೂ ಎರಡನೇ ಸ್ಥಾನ ಬಂದಾದರೂ ಸಿಎಂ ಆಗಿದ್ದಾರಾ? ಮೂರನೇ ಸ್ಥಾನ ತೆಗೆದುಕೊಂಡು ಎರಡು ಬಾರಿ ಸಿಎಂ ಆದವರು, ಇನ್ನು ದೇವೇಗೌಡರು ರಾಜ್ಯದಲ್ಲಿ ಅತಂತ್ರ ಸರಕಾರ ಬರುವುದಕ್ಕೆ ಕಾರ್ಯ ತಂತ್ರ ರೂಪಿಸುತ್ತಲೇ ಇರುತ್ತಾರೆ” ಎಂದರು.