Advertisement

ಎಮ್‌ಜೆಎಸಿ ಕಾಯ್ದೆ ರದ್ದು; ಸುಪ್ರೀಂ ಬಗ್ಗೆ ಉಪರಾಷ್ಟ್ರಪತಿ ಅಸಮಾಧಾನ

08:54 PM Dec 03, 2022 | Team Udayavani |

ನವದೆಹಲಿ: ಕೊಲಿಜಿಯಂ ಅನ್ನು ರದ್ದು ಮಾಡಿ, ಅದರ ಬದಲಿಗೆ ತರಲಾಗಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಬಳಿಕ ಸಂಸತ್‌ನಲ್ಲಿ ಯಾವುದೇ ಗುಸುಗುಸು, ಪಿಸುಮಾತು ಇರಲಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಹೇಳಿದರು.

Advertisement

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರ ಸಮ್ಮುಖದಲ್ಲೇ ಸುಪ್ರೀಂ ಕೋರ್ಟ್‌ ವಿರುದ್ಧ ಅಸಮಾಧಾನ ಹೊರಹಾಕಿದ ಧನ್‌ಕರ್‌, “ಸಂಸತ್‌ ಅಂಗೀಕರಿಸುವ ಕಾನೂನು, ಜನರ ಆಶಯಗಳನ್ನು ಪ್ರತಿಫ‌ಲಿಸುತ್ತದೆ. ಆದರೆ ಅದನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡುತ್ತದೆ. ಇಂಥದ್ದೊಂದು ಘಟನೆ ಪ್ರಪಂಚದಲ್ಲಿ ಎಲ್ಲೂ ಈವರೆಗೆ ನಡೆದಿಲ್ಲ,’ ಎಂದರು.

“ಕಾನೂನಿಗೆ ಸಂಬಂಧಿಸಿದಂತೆ ವಸ್ತುನಿಷ್ಠ ಪ್ರಶ್ನೆಗಳು ಉದ್ಭವಿಸಿದಾಗ, ನ್ಯಾಯಾಲಯಗಳು ಅವುಗಳನ್ನು ಪರಿಹರಿಸಬಹುದು. ಆದರೆ ನಿಬಂಧನೆಗಳನ್ನು ರದ್ದುಗೊಳಿಸಬಹುದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ,’ ಎಂದು ಹೇಳಿದರು. “ಸಂವಿಧಾನದ ಪ್ರಸ್ತಾವನೆಯು ಭಾರತದ ಜನರಾದ ನಾವು ಎಂದು ಸಂಬೋಧಿಸುತ್ತದೆ. ಜನರ ಇಚ್ಛೆಗಳನ್ನು ಸಂಸತ್ತು ಪ್ರತಿಫ‌ಲಿಸುತ್ತದೆ,’ ಎಂದರು.

ಎಮ್‌ಜೆಎಸಿ ಕಾಯ್ದೆಯನ್ನು ಉಲ್ಲೇಖಿಸಿದ ಅವರು, “2015-16ರಲ್ಲಿ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚಿಸುವಾಗ ಇಡೀ ಸಂಸತ್ತು ಅವಿರೋಧವಾಗಿ ಅದಕ್ಕೆ ಮತ ಹಾಕಿತ್ತು. ರಾಜ್ಯಸಭೆಯಲ್ಲೂ ಅವಿರೋಧವಾಗಿ ಅಂಗೀಕಾರವಾಗಿತ್ತು. ಒಬ್ಬರು ಮಾತ್ರ ಗೈರಾಗಿದ್ದರು,’ ಎಂದು ಸ್ಮರಿಸಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಸ್ಥಾನ ಕೊಡುವಿರಾ? : ಫ್ಲೆಕ್ಸ್ ಹಿಡಿದು ರೌಡಿ ಶೀಟರ್ ಏಕಾಂಗಿ ಪ್ರತಿಭಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next