Advertisement

UV Fusion: ಅನುಭವದ ಸಂತೆಯಲ್ಲಿ ಏನುಂಟು ಏನಿಲ್ಲ

11:42 AM Dec 14, 2024 | Team Udayavani |

ಕರಗುತ್ತಿವೆ ನೆನಪುಗಳು, ಕಳೆಯುತ್ತಿದೆ ಬದುಕಿನ ಕ್ಷಣಗಳು, ಕಾಡುತ್ತಿವೆ ಹಳೆಯ ದಿನಗಳು. ಹೌದು ಬದುಕು ನಿನ್ನೆಯಂತಿಲ್ಲ, ಬಾಳು ಎನ್ನುವ ನಿರಂತರ ಪಯಣದಲ್ಲಿ ಸಿಕ್ಕವರೆಷ್ಟು ಕಳೆದುಕೊಂಡವರೆಷ್ಟು ಅನುಭವವೆಂಬ ಊರೊಳು ಚಿಂತೆಗಳ ಸಂತೆಗಳು ನೆನಪುಗಳ ಕಂತೆಗಳು ನಿರಂತರ ಓಡಾಡುತ್ತಲೇ ಇರುತ್ತವೆ. ಬದುಕನ್ನು ಅಂದಗೊಳಿಸುವ ಸಾಧನವೆಂದರೆ ಅದು ಅನುಭವ ಮಾತ್ರ.

Advertisement

ಸೋತವನಿಗೆ ಬೆಳಕಾಗಿ, ಕತ್ತಲಲ್ಲಿ ದೀಪವಾಗಿ, ನೊಂದವನಿಗೆ ನೆರಳಾಗಿ ನಿಲ್ಲುವುದು ಅನುಭವ ಮಾತ್ರ. ಯಾವುದೇ ಕೆಲಸ ಮಾಡಬೇಕಾದರೆ ಅನುಭವ ಬೇಕಾಗುತ್ತದೆ. ಆದ್ರೆ ಈ ಅನುಭವವನ್ನು ಸಿದ್ದಿಸುವುದು ಮತ್ತು ಮತ್ತು ಗಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಬೇಕಾಗಿರುವುದು ಕಠಿಣ ತಯಾರಿ, ದೃಢ ನಿರ್ಧಾರ, ಗುರಿ. ಹೌದು, ಈ ಸಾಧನಗಳ ಪರಿಕಲ್ಪನೆ, ಜ್ಞಾನ ನಮ್ಮದಾಗಿರಬೇಕು.

ಬದುಕಿನ ಉದ್ದಕ್ಕೂ ಒಂದೊಂದು ಕ್ಷಣಗಳು ನಮ್ಮನ್ನು ಬಿಗಿದಪ್ಪಿಕೊಳ್ಳಲು ಬರುತ್ತವೆ. ಆ ಕ್ಷಣಗಳು ನೋವಿಗೋ ನಲಿವಿಗೋ ಎಡೆಮಾಡಿಕೊಡಬಹುದು. ಆದರೆ ಆ ಸಂದರ್ಭದಲ್ಲಿ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಅನುಭವ ಹೇಳಿ ಕೊಡುತ್ತದೆ. ಅದಕ್ಕೆ ತಾನೆ ಹೇಳುವುದು ಅನುಭವವೇ ಮೊದಲ ಪಾಠ ಶಾಲೆ, ಶಿಕ್ಷಕ ಎಂದು. ಯಾವುದೇ ಕಾರ್ಯಮಾಡಲು ಅನುಭವಗಳು ಆಧಾರವಾಗಿರುತ್ತದೆ. ಸರಿ-ತಪ್ಪುಗಳ ಲೆಕ್ಕಾಚಾರ ಅದಕ್ಕೆ ಸರಿಯಾಗಿ ತಿಳಿದಿರುತ್ತದೆ.

ಮುಂದೆ ಎದುರಾಗುವ ಘಟನೆಗಳನ್ನು ಊಹಿಸುವುದು ಅಸಾಧ್ಯವಾಗಿದ್ದರೂ ಆ ಘಟನೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಶಕ್ತಿಗೆ ಈ ಅನುಭವ ಸಹಾಯಕ್ಕೆ ಬರುತ್ತದೆ. ತಂದೆ ತಾಯಿ ಅನುಭವದ ಮಾತು ಶಿಕ್ಷಕರ ಅನುಭವದ ವಚನ ಜೊತೆಗೆ ಸ್ವತಃ ತನಗಾಗುವ ಅನುಭವ ಬಾಳಲ್ಲಿ ಅಮೂಲ್ಯ.

 ಗಿರೀಶ್‌ ಪಿ.ಎಂ. 

Advertisement
Advertisement

Udayavani is now on Telegram. Click here to join our channel and stay updated with the latest news.

Next