Advertisement

UV Fusion: ಗುಡ್ಡದ ಭೂತದಲ್ಲಿ ಸಿಲುಕಿದ ಉತ್ತರಕನ್ನಡ

03:28 PM Sep 08, 2024 | Team Udayavani |

ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳು, ದಟ್ಟವಾದ ಅರಣ್ಯ ಪ್ರದೇಶಗಳು, ವನ್ಯಜೀವಿಗಳು, ಪ್ರವಾಸೋದ್ಯಮ, ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಏಕೈಕ ಜಿಲ್ಲೆ  ಅದುವೇ ನಮ್ಮ ಉತ್ತರ ಕನ್ನಡ…  ಇದು  ಜಿಲ್ಲೆಗಿರುವ ಐಡೆಂಟಿಟಿ ಎಂದರೇ ತಪ್ಪಾಗಲಿಕ್ಕಿಲ್ಲ…  ಮಳೆಗಾಲದಲ್ಲಿ ಅದೆಷ್ಟೋ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ  ಜಿಲ್ಲೆ ಪ್ರಸ್ತುತ ಕಾಲಮಾನದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದೆ.

Advertisement

ಕಳೆದ ಕೆಲ ವರ್ಷಗಳಲ್ಲಿ ಕೊಡಗು, ಕಳಸ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿ, ಗುಡ್ಡ ಕುಸಿದು ಅದೆಷ್ಟೋ ಅನಾಹುತಗಳು ಸಂಭವಿಸಿ, ಹಲವು ಮನೆಗಳು ಮಣ್ಣಿನಡಿ ಸಿಲುಕಿ ಅದೆಷ್ಟೋ  ಪ್ರಾಣಿಗಳು, ಮನುಷ್ಯರು ಅಸುನೀಗಿದ್ದಾರೆ. ಆದರೆ ಇದೀಗ ನಮ್ಮ ಜಿಲ್ಲೆಯಲ್ಲಿಯೇ ಹಲವು ಪ್ರದೇಶಗಳಲ್ಲಿ ಇಂತಹ ಘಟನೆಗಳು ಸಂಭವಿಸಿದೆ ಹಾಗೂ ಸಂಭವಿಸುತ್ತಲೇ ಇವೆ. ಇದಕ್ಕೆಲ್ಲಾ ಕಾರಣವೇನೆಂದು ಯೋಚಿಸಿದಾಗ ಅತಿ ಅಭಿವೃದ್ಧಿಯೇ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಜತೆಗೆ ಮಾನವನ ಸ್ವಾರ್ಥವೂ ಕೂಡಿದೆ.

content-img

ಸಾಗುವಳಿ,  ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಮನೆ ಕಟ್ಟಿಕೊಳ್ಳುವ ಸಲುವಾಗಿ ಅವೈಜ್ಞಾನಿಕವಾಗಿ ಗುಡ್ಡ ಕಡಿತ, ರೈಲ್ವೆ ಮಾರ್ಗ ರೆಸಾರ್ಟ್‌, ಜನವಸತಿ ನಿರ್ಮಾಣ ಗಳಿಗಾಗಿ ನದಿ ಅಂಚನ್ನು ತುಂಬಿಸುವುದು  ಇವೆಲ್ಲವೂ ಕಾರಣ ಎಂದು ವರದಿಗಳು ಹೇಳಿವೆ.

ಇಲ್ಲಿ ರಸ್ತೆ ವಿಸ್ತರಿಸಲು ಅವೈಜ್ಞಾನಿಕವಾಗಿ ಗುಡ್ಡ ಕೊರೆಯಲಾಗಿದೆ. ಯಾವುದೇ ತಡೆಗೋಡೆಯನ್ನೂ ಸಹ ನಿರ್ಮಿಸಿಲ್ಲ. ಅದರ ಪರಿಣಾಮ ಹಲವಾರು ಮುಗ್ಧ ಜೀವಿಗಳು ಪ್ರಾಣ ತೆತ್ತರು.

Advertisement

ಕೆಲಮೊಮ್ಮೆ ಗುಡ್ಡವನ್ನು ಕಡಿಯುವುದು ಅನಿವಾರ್ಯವೂ ಹೌದು. ಆದರೆ ಅದನ್ನು ವ್ಯವಸ್ಥಿತವಾಗಿ  ಅಚ್ಚುಕಟ್ಟಾಗಿ ಕಾರ್ಯ ರೂಪಕ್ಕೆ ತರುವುದು ಬಹಳ ಮುಖ್ಯ.. ಇಲ್ಲದಿದ್ದರೆ ಮಳೆಗಾಲದಲ್ಲಿ ಇಂತಹ ಘಟನೆಗಳು,ಅನಾಹುತಗಳು, ಜೀವಹಾನಿಗಳು ಹೆಚ್ಚೆಚ್ಚು ಸಂಭವಿಸುತ್ತಲೇ ಇರುತ್ತದೆ.

-ಕಾವ್ಯಾ ಹೆಗಡೆ

ವಾನಳ್ಳಿ

Advertisement

Udayavani is now on Telegram. Click here to join our channel and stay updated with the latest news.