Advertisement

Mosquito: ಮಳೆಗಾಲದ ಸೊಳ್ಳೆಗಳು…!

03:18 PM Jun 28, 2024 | Team Udayavani |

ಮಲೇರಿಯಾ, ಡೆಂಗ್ಯೂ ಜ್ವರ, ಚಿಕನ್‌ ಗುನ್ಯಾ ದಿಂದ ಎಚ್ಚರದಿಂದಿರಿ

Advertisement

ಸೊಳ್ಳೆ ಮಳೆಗಾಲದ ಅತಿಥಿ.  ಸೊಳ್ಳೆಗಳ ಹಾವಳಿ ಸಾಮಾನ್ಯ ದಿನಕ್ಕೆ ಹೋಲಿಸಿದರೆ ಮಳೆಗಾಲದಲ್ಲಿ ಅಧಿಕವಾಗಿದ್ದು ಇವು ರಕ್ತ ಹೀರುವುದಲ್ಲದೆ ಅನೇಕ ರೋಗಗಳನ್ನು ಹರಡಲು ಕಾರಣವಾಗಿದೆ. ಬಂದು ನಿಲ್ಲುವ ಮಳೆ, ಮನೆಯ ಸುತ್ತ ಬೆಳೆದ ಹುಲ್ಲು, ಗಿಡ-ಕಂಟಿ, ಅಲ್ಲಲ್ಲಿ ನೀರು ತುಂಬಿದ ಪಾತ್ರೆ-ಕರಟ ಸೊಳ್ಳೆಯ ಉತ್ಪತ್ತಿಗೆ ಕಾರಣವಾಗುತ್ತದೆ.

ಎಲ್ಲರಿಗೂ ಮನೆ ಹೊರಗೂ ಮತ್ತು ಒಳಗೂ ಸೊಳ್ಳೆಗಳ ಭಯವಿರುತ್ತದೆ.  ಏಕೆಂದರೆ ಇವುಗಳಿಂದ ಹರಡುವ ರೋಗಗಳ ಪಟ್ಟಿಯು ಅತಿ ದೊಡ್ಡದಿದೆ.  ಅದರಲ್ಲೂ ಹೆಣ್ಣು ಸೊಳ್ಳೆಗಳಂತೂ ರಕ್ತ ಕುಡಿಯುವುದಲ್ಲದೇ  ಅನೇಕ ಭಯಾನಕ ರೋಗಗಳನ್ನು ಹರಡುತ್ತವೆ.

ಉದಾಹರಣೆ ಮಲೇರಿಯಾ, ಡೆಂಗ್ಯೂ ಜ್ವರ, ಚಿಕನ್‌ ಗುನ್ಯಾ, ಝಿಕಾ ವೈರಸ್‌, ಹಳದಿ ಜ್ವರ ಮತ್ತು ಆನೆಕಾಲು ರೋಗ ಮುಂತಾದವುಗಳು. ಸಾಮಾನ್ಯ ದಿನಕ್ಕೆ ಹೋಲಿಸಿದಂತೆ ಮಳೆಗಾಲದಲ್ಲಿ ಸೊಳ್ಳೆಗಳ ಪ್ರಮಾಣ ಅತಿ ಹೆಚ್ಚಿರುತ್ತದೆ.  ಹೆಣ್ಣು ಸೊಳ್ಳೆಗಳು ತಮ್ಮ ಮರಿಗಳಿಗೆ ಬಲಿಷ್ಠತೆ ಮತ್ತು ಪೋಷಕಾಂಶಗಳನ್ನು ನೀಡುವುದಕ್ಕಾಗಿ ಮತ್ತು ಹೆಚ್ಚು ಮರಿಗಳನ್ನು ಉತ್ಪಾದಿಸುವುದಕ್ಕಾಗಿ ಅನೇಕ ಜನರ ಅಥವಾ ಪ್ರಾಣಿಗಳ ರಕ್ತವನ್ನು ಹೀರಿ, ಹೀರಿದ ರಕ್ತವನ್ನು ನೀರಿನ ಮೇಲಿಟ್ಟ ತನ್ನ ಮರಿಗಳನ್ನು ಬಲಿಷ್ಠ ಪಡಿಸಲು ಬಳಸುತ್ತದೆ. ಮೊಟ್ಟೆಗಳು ನೀರಿನಲ್ಲಿ ಮರಿಯಾಗುತ್ತದೆ.  ಆ ಮರಿಗಳು ನೀರಿನಲ್ಲಿ ಈಜಾಡಿಕೊಂಡು ಲಾರ್ವ, ಪ್ಯೂಪ ಮತ್ತು ವಯಸ್ಕ ಸ್ಥಾನಕ್ಕೆ ಬಂದು ಅನೇಕ ರೋಗಗಳನ್ನುರಡುವ ಮೂಲಗಳಾಗುತ್ತವೆ

ಫ್ಲೋರಿಡಾ ವಿಶ್ವವಿದ್ಯಾಲಯದ ಪಿ ಎಚ್‌ ಡಿ ಪ್ರಾಧ್ಯಾಪಕರಾದ ಜರ್ರಿ ಬ್ಲಾಟರ್‌ ಅವರ ಪ್ರಕಾರ ಸೊಳ್ಳೆಗಳಲ್ಲಿ 2500 ಪ್ರಭೇದಗಳಿದ್ದು ಅದರಲ್ಲಿ 400 ಪ್ರಭೇದಗಳು ಅನಾಫಿಲೀಸ್‌ ಮತ್ತು  40 ಪ್ರಭೇದಗಳು ಮಲೇರಿಯಾ ರೋಗವನ್ನು ಹರಡುವ ಪ್ರಭೇದಕ್ಕೆ ಸೇರುತ್ತವೆ. ಮುಖ್ಯವಾಗಿ ಸೊಳ್ಳೆಗಳು ಯಾವತ್ತಿಗೂ ಆಹಾರ ಉದ್ದೇಶಕ್ಕಾಗಿ ರಕ್ತವನ್ನುಹೀರುವುದಿಲ್ಲ.

Advertisement

ಅವು ತಮ್ಮ ಸಂತಾನೋತ್ಪತ್ತಿಗಾಗಿ ಪ್ರೋಟೀನ್‌ಗಳನ್ನು ಪಡೆಯುವುದಕ್ಕಾಗಿ, ಅದರಲ್ಲೂ  ಓಗುಂಪಿನ ರಕ್ತ ಉಳ್ಳವರ ಸೊಳ್ಳೆಗಳ ಆಕರ್ಷಿತವಾಗುವ ಸಾಧ್ಯತೆ ಶೇಕಡ 83ಕ್ಕೂ ಹೆಚ್ಚಿದ್ದು  ಬಿ ಗುಂಪಿನವರತ್ತ ಸೊಳ್ಳೆಗಳ ಆಕರ್ಷಣೆ  ಸಾಮಾನ್ಯ ವಾಗಿರುತ್ತದೆ ಅದಲ್ಲದೆ “ಎ ” ಗುಂಪಿನವರತ್ತ ಆಕರ್ಷಣೆ ಅತಿ ಕಡಿಮೆ ಇರುತ್ತದೆ. ಅದಲ್ಲದೆ ಸಾಮಾನ್ಯವಾಗಿ ಸೊಳ್ಳೆಗಳು ಅತಿ ಹೆಚ್ಚು ಗರ್ಭಿಣಿಯರನ್ನು, ವ್ಯಾಯಾಮ ನಿರತರನ್ನು, ಮತ್ತು ಅತಿ ಹೆಚ್ಚು ಇಂಗಾಲ ಡೈಯಾಕ್ಸೈಡ್‌ ಹೊರಸುಸುವವರ ರಕ್ತವನ್ನು ಹೀರುತ್ತವೆ.

ಸೊಳ್ಳೆಗಳನ್ನು ತಡೆಯಲು ಅಥವಾ ಸೊಳ್ಳೆಗಳಿಂದ ಬರುವ ರೋಗಗಳನ್ನು ತಡೆಯಲು ಅನೇಕ ಪ್ರಕಾರದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಕೆಲವೊಂದು ನೈಸರ್ಗಿಕವಾಗಿದ್ದು ಇನ್ನು ಕೆಲವು ವಿದ್ಯುತ್‌ ನಿಂದ  ಮತ್ತು ರಾಸಾಯನಿಕಗಳಾದ ಸೊಳ್ಳೆ ಕಾಯಿಲ್‌, ಸ್ಪ್ರೇ ಮತ್ತು ಮುಂತಾದವುಗಳಿಂದ ಸೊಳ್ಳೆಗಳನ್ನು ಓಡಿಸಬಹುದು.

ಕೆಲವು ರಾಸಾಯನಿಕಗಳು ಕೆಲವರ ದೇಹಕ್ಕೆ ಹಾನಿಕಾರಕವಾಗುವುದರಿಂದ ನೈಸರ್ಗಿಕ ಉತ್ಪನ್ನಗಳಾದ ಬೇವು, ಕರ್ಪೂರ, ತೆಂಗಿನ ಚಿಪ್ಪು ಮುಂತಾದ ನೈಸರ್ಗಿಕ ಉತ್ಪನ್ನಗಳಿಂದ ಸೊಳ್ಳೆಗಳನ್ನು  ಓಡಿಸಬಹುದು. ಬೇವು ಆಂಟಿ ಮೈಕ್ರೋಬಯಲ್‌ ಮತ್ತು ಆಂಟಿ ಫಂಗಲ್‌ ಪ್ರಾಪರ್ಟಿ ಗುಣ ಇದರಲ್ಲಿ ಇದ್ದು ಕೇವಲ ಸೊಳ್ಳೆ ಮಾತ್ರವಲ್ಲದೇ ಬೇರೆ ಕೀಟಗಳನ್ನು ದೂರವಿಡುತ್ತದೆ.

ಇದೇ ಅಂಶಗಳು ಬೋನ್ಸಾಯಿ ಗಿಡದಲ್ಲೂ ಲಭ್ಯವಿದೆ. ಇದನ್ನು ಮನೆಯೊಳಗಿನ ಬಾಲ್ಕನಿಯಲ್ಲೂ ಬೆಳೆಯಬಹುದಾಗಿದೆ. ಬೇವಿನ ಕಹಿ ವಾಸನೆಗಳು ಸೊಳ್ಳೆಗಳಿಗೆ ಆಗುವುದಿಲ್ಲ. ಮನೆಯಲ್ಲಿ ಯಾವುದಾದರೂ ಕಾರಣಕ್ಕೆ ಧೂಪ ದ್ರವ್ಯಗಳನ್ನು ಹಾಕುವುದಾದರೆ, ಅದಕ್ಕೆ ಒಂದೆರಡು ಒಣಗಿದ ಬೇವಿನ ಎಲೆ ಅಥವಾ ಪುಡಿಯನ್ನು ಹಾಕುವುದು ಉತ್ತಮ. ಆದರೆ, ಇದನ್ನು ಹೆಚ್ಚಾಗಿ ಮಾಡಬೇಡಿ. ಕಾರಣ ಇದು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ನಿಂಬೆ ಎಲೆ ಕೂಡ ಸೊಳ್ಳೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇದೇ ಕಾರಣಕ್ಕೆ ಇದರ ಎಣ್ಣೆಯನ್ನು ಸೊಳ್ಳೆ ಮತ್ತು ಇತರ ಕೀಟಗಳನ್ನು ಓಡಿಸಲು ಬಳಕೆ ಮಾಡಲಾಗುವುದು. ರೋಸೆ¾ರಿ ಗಿಡವನ್ನು ಬೆಳೆಸುವುದರಿಂದ ಕೂಡ ಮನೆಯಲ್ಲಿ ಸೊಳ್ಳೆಯ ಕಾಟವನ್ನು ತಪ್ಪಿಸಬಹುದು. ಇದು ಕೂಡ ಘಾಟು ವಾಸನೆ ಹೊರಸೂಸುವುದರಿಂದ ಸೊಳ್ಳೆಗಳು ಸುಲಭವಾಗಿ ಮನೆಗೆ ನುಗ್ಗುವುದನ್ನು ತಡೆಯುತ್ತದೆ. ಮನೆ ಮುಂದೆ ತುಳಸಿ ಇರುವುದು ಸಾಮಾನ್ಯ, ಇದರ ಎಲೆಗಳ ವಾಸನೆ ಕೂಡ ಸೊಳ್ಳೆಗಳನ್ನು ಆಕರ್ಷಿಸುವುದಿಲ್ಲ. ತುಳಸಿ ಎಲೆಗಳನ್ನು ನೀರಿನಲ್ಲಿ ಬೆರಸಿ ಅದರ ನೀರನ್ನು ಮನೆಯಲ್ಲಿ ಸಿಂಪಡಿಸಬಹುದು.

ಕ್ಯಾಟ್ನಿಪ್‌  ಪುದಿನಾ ಎಲೆಗಳಂತೆ ಇರುತ್ತದೆ. ಇದು ಕೂಡ ಮನೆಯಲ್ಲಿ ಸೊಳ್ಳೆ ಮತ್ತಿತ್ತರ ಕೀಟ ಜೊತೆಗೆ ಜೇಡಗಳ ಪ್ರವೇಶವನ್ನು ನಿರ್ಬಂಧಿಸುತ್ತದೆ. ಕುಂಡದ ಲ್ಲಿ ಬೆಳೆಯ ಬಹುದಾದಂತಹ ಅಜರೆಟಮ್‌ ಗಿಡದ ಬಣ್ಣ ಬಣ್ಣದ ಸಣ್ಣದ ಹೂವುಗಳು ಆಕರ್ಷಣೀ ಯವಾಗಿದೆ. ಈ ಹೂವಿನ ವಾಸನೆ ಕೂಡ ಸೊಳ್ಳೆಗಳನ್ನು ಆಕರ್ಷಿಸುವುದಿಲ್ಲ. ಈ ಹೂವುಗಳನ್ನು ನೀರಿನಲ್ಲಿ ನೆನಸಿ ಅದರ ನೀರನ್ನು ಮನೆಯಲ್ಲಿ ಸ್ಪ್ರೇ ಮಾಡುವುದರಿಂದ ಸೊಳ್ಳೆಗಳನ್ನು ತಡೆಯಬಹುದಾಗಿದೆ.

ಲ್ಯಾವೆಂಡರ್‌ ಕೂಡ ಸೊಳ್ಳೆಗಳ ನಿವಾರಕ ಎಂದೇ ಹೆಸರಿಸಲಾಗಿದೆ. ಇದು ನಾಲ್ಕು ಅಡಿ ಉದ್ದಕ್ಕೆ ಬೆಳೆಯುತ್ತದೆ. ಇದನ್ನು ಮನೆ ಗಾರ್ಡನ್‌ ಅಥವಾ ಬಾಲ್ಕನಿಯಲ್ಲಿ ಬೆಳೆಸಬಹುದು. ಇದು ಸೊಬಗನ್ನೂ  ಹೆಚ್ಚಿಸುತ್ತದೆ. ಸೊಳ್ಳೆಯ ಕಾಟದಿಂದ ವಿಮುಖವಾಗುವ ಉಪಾಯಗಳು ಕೈಗೆಟಕುವಲ್ಲಿಯೇ ಇವೆ. ಸಾಧಿಸಬೇಕಷ್ಟೇ.

 -ಶ್ರೀಕಾಂತ ಎಂ.

ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next