Advertisement

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ

02:26 PM Jun 24, 2024 | Team Udayavani |

ಕಳೆದು ಹೋದ ಸಮಯಗಳಿಗೆ ನೆನಪುಗಳು ಅಷ್ಟೇ ಸೀಮಿತ..!! ಭಾವನೆಗಳು ಒಂಥರಾ ಸಿಹಿ. ಅದೊಂಥರಾ ಹೇಳಿಕೊಳ್ಳುವ ಮನಸ್ಸುಗಳಿಗೆ ಖುಷಿ ಯ ಗಳಿಗೆ. ಭಾವನೆಗಳು ನೆನಪುಗಳೊಂದಿಗೆ ಕಳೆದು ಭಾವ ಪರವಶರಾಗುತ್ತೇವೆ.

Advertisement

ಕಲ್ಪನೆಗಳು, ಕನಸುಗಳು, ಆಸೆಗಳು, ವಿಚಾರಗಳು ಜೀವ ತಳೆಯುತ್ತವೆ. ಆಕಾಂಕ್ಷೆ, ಚಿಂತನೆಗಳು ಹುಟ್ಟಿಕೊಂಡರೂ ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ… ಕಳೆದು ಹೋದ ಸಮಯ, ಸಂದರ್ಭ ಇನ್ನೊಂದು ಬಾರಿ ಮರಳಿ ಬರುವುದಿಲ್ಲ, ಚಿನ್ನ ವಜ್ರಕ್ಕಿಂತನು ಬೆಳೆಬಾಳುವುದು ಸಮಯ ಅಷ್ಟೇ ಇಲ್ಲಿ ಯಾವುದು ನಮ್ಮದಲ್ಲ ಈ ಕ್ಷಣ ಮಾತ್ರ ನಮ್ಮದು ಅದನ್ನು ಪ್ರತಿ ಕ್ಷಣ ಅನುಭವಿಸಬೇಕು. ವ್ಯಕ್ತಿಗಳು ಬದಲಾದರೂ ಸಮಯ ಬದಲಾದರೂ ಅವರೊಂದಿಗೆ ಕಳೆದ ನೆನಪು ಶಾಶ್ವತವಾಗಿರುತ್ತದೆ.

ಪ್ರತಿಯೊಂದು ಶಿಲ್ಪಿಯು ಶಿಲೆಯ ಬದಲು ಬೇರೊಂದು ಶಿಲೆಯನ್ನು ಕೆತ್ತನೆ ಮಾಡಿದರೆ ಅ ಶಿಲೆಗೆ ಯಾವುದೇ ಒಂದು ಹೊಳಪು, ರೂಪವನ್ನು ಬದಲಾವಣೆ ಮಾಡಲು ಸಾಧವಿಲ್ಲ ಬದಲಾವಣೆ ಮಾಡಿದಲ್ಲಿ ಶಿಲೆಯ ರೂಪ ವಿಭಿನ್ನವಾಗಿ ಬಿಡುತ್ತದೆ.

ಅನಂತರ ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಯಾವುದೇ ಒಂದು ವ್ಯಕ್ತಿಯ ಜೊತೆ ಪ್ರತಿಯೊಂದು ಕ್ಷಣ ಭಿನ್ನವಾಗಿರುತ್ತದೆ ಅ ಕ್ಷಣಗಳನ್ನು ಮತ್ತೆ ಮರಳಿ ನೆನಪುಗಳ ಪುಟಗಳಲ್ಲಿಯೇ ಕಾಣಬೇಕು.  ಬದಲಾದ ಸಮಯದಲ್ಲಿ ನಾವು ನೆನಪುಗಳ ಬುತ್ತಿಯನ್ನು ಹೊತ್ತುಕೊಂಡು ಸಾಗಬೇಕು ಪುಸ್ತಕಗಳ ಪುಟಗಳು ಒಂದೊಂದು ತಿರುಗಿಸಿದಂತೆ ಭಾವನೆಗಳು ಮತೊಮ್ಮೆ ಅದೇ ಸಮಯವನ್ನು ಕಳೆಯುವ ಅನುಭವನ್ನು ಸಂಭ್ರಮ ಪಡಬೇಕು. ಮಾತುಗಳ ಸರಮಾಲೆಯಲ್ಲಿ ಪ್ರತಿಯೊಂದು

ನೆನಪುಗಳು ಬೇರೆಯವರೊಂದಿಗೆ ಹಂಚೋಣ. ಭಾವನೆಗಳು ನೆನಪುಗಳ ಸಮತೋಲನ ಅತ್ಯಂತ ಅಗತ್ಯವಾದುದು. ಪ್ರೀತಿ, ಸ್ನೇಹ, ಮೋಹ, ಕೋಪ ಹೀಗೆ.. ಯಾವ ರೀತಿಯ ಭಾವನೆಗಳು ಅತಿಯಾದರೂ ಮನಸ್ಸು ದಾರಿ ತಪ್ಪುತ್ತದೆ.

Advertisement

-ಶ್ವೇತಾ

ಎಂ.ಪಿ.ಎಂ., ಸ.ಪ್ರ. ದರ್ಜೆ ಕಾಲೇಜು ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next