Advertisement
ಇಲ್ಲಿನ ಅಲಕಾನಂದ ನದಿಯು ತನ್ನ ಅಪಾಯದ ಮಟ್ಟಕ್ಕಿಂತ 30 ಅಡಿ ಎತ್ತರದಲ್ಲಿ ಹರಿಯುತ್ತಿರುವುದು ಈ ಭಾಗದಲ್ಲಿನ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ. ಇನ್ನು ಭೂ ಕುಸಿತದ ಕಾರಣದಿಂದ ಉತ್ತರ ಕಾಶಿ – ಡೆಹ್ರಾಡೂನ್ ಹೆದ್ದಾರಿಯು ಮುಚ್ಚಲ್ಪಟ್ಟಿದೆ. ಇನ್ನು ಕೈಲಾಸ್ ಮಾನಸ ಸರೋವರ ಯಾತ್ರಾರ್ಥಿಗಳೂ ಸಹ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ರಾಜ್ಯ ವಿಪತ್ತು ನಿರ್ವಹಣಾ ದಳಗಳು ಈ ಭಾಗಲದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಪೌರಿ ಗರ್ಹವ್ವಾಲ್, ಚಮೋಲಿ, ಉತ್ತರಕಾಶಿ, ಮತ್ತು ರುದ್ರಪ್ರಯಾಗ್, ಪಿತೋರಾಗಢ್, ಚಂಪಾವತ್, ಭಗೇಶ್ವರ್ ಮತ್ತು ನೈನಿತಾಲ್ ಪ್ರದೇಶಗಳು ಮಳೆಯಿಂದಾಗಿ ಹೆಚ್ಚಿನ ಹಾನಿಯನ್ನು ಅನಭವಿಸಿವೆ. ಆಗಸ್ಟ್ 19ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಉತ್ತರಾಖಂಡ ಹಮಾಮಾನ ಇಲಾಖೆಯ ನಿರ್ದೇಶಕ ಬಿಕ್ರಂ ಸಿಂಗ್ ಅವರು ಮಾಹಿತಿ ನೀಡಿದ್ದಾರೆ. ರುದ್ರಪ್ರಯಾಗದಲ್ಲಿ ಎಲ್ಲಾ ಘಾಟ್ ಗಳೂ ನೆರೆ ನೀರಿನಲ್ಲಿ ಮುಳುಗಲ್ಪಟ್ಟಿವೆ. ಜೋಶಿ ಮಠದಿಂದ ಬದರಿನಾಥ್ ಕಡೆಗೆ ಸಾಗುವ ಯಾತ್ರಾರ್ಥಿಗಳಿಗೆ ಲಂಬಾಗರ್ ಎಂಬ ಪ್ರದೇಶದಲ್ಲಿ ಉಂಟಾಗುತ್ತಿರುವ ಭೂಕುಸಿತದಿಂದ ಆತಂಕ ಉಂಟಾಗಿದೆ. ಆದರೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯ ಆಡಳಿತವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
Related Articles
Advertisement