ಉತ್ತರ ಪ್ರದೇಶ : ರಾಷ್ಟ್ರ ರಾಜಧಾನಿಯಲ್ಲಿ ಶ್ರದ್ಧಾ ವಾಕರ್ ಭೀಕರ ಹತ್ಯೆಯ ಪ್ರಕರಣ ಮಾಸುವ ಮುನ್ನವೇ ಉತ್ತರ ಪ್ರದೇಶದ ಸೀತಾಪುರದಲ್ಲಿ ಅಂತಹುದೇ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.
ಮದುವೆಯಾಗಿ ಹತ್ತು ವರ್ಷದ ಬಳಿಕ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿ ಗುರುತು ಸಿಗಬಾರದೆಂದು ದೇಹವನ್ನು ತುಂಡರಿಸಿ ಉತ್ತರ ಪ್ರದೇಶದ ವಿವಿಧ ಭಾಗದಲ್ಲಿ ಎಸೆದಿರುವ ಭಯಾನಕ ಘಟನೆ ನಡೆದಿದೆ.
ಘಟನೆ ವಿವರ:
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿರುವ ಪಂಕಜ್ ಮೌರ್ಯ ಹಾಗೂ ಸ್ನೇಹ ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿ ಅನ್ಯೋನ್ಯವಾಗಿದ್ದರು ಆದರೆ ಪತ್ನಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದಳು ಎನ್ನಲಾಗಿದೆ ಅಲ್ಲದೆ ಸ್ನೇಹಾ ಬೇರೆಯವರೊಂದಿಗೂ ಸಂಬಂಧ ಹೊಂದಿದ್ದಳು ಎನ್ನಲಾಗಿದೆ ಈ ವಿಚಾರವಾಗಿ ಕೆಲವೊಂದು ದಿನ ಮನೆಗೂ ಬರುತ್ತಿರಲಿಲ್ಲ ಎನ್ನಲಾಗಿದೆ, ಇದೆಲ್ಲಾ ವಿಚಾರದಿಂದ ವಿಚಲಿತನಾದ ಪತಿ ಪಂಕಜ್ ತನ್ನ ಪತ್ನಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದು ಅಲ್ಲದೆ ಈತನ ಕೃತ್ಯಕ್ಕೆ ಆತನ ಸ್ನೇಹಿತರನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾನೆ.
ಪಂಕಜ್ ಹಾಕಿದ ಲೆಕ್ಕಾಚಾರದಂತೆ ಸ್ನೇಹಿತನ ಸಹಕಾರದೊಂದಿಗೆ ಪತ್ನಿಯನ್ನು ಕೊಲೆಗೈದು ಇನ್ನು ಗುರುತು ಸಿಗಬಾರದೆಂದು ದೇಹವನ್ನು ತುಂಡರಿಸಿ ಸೀತಾಪುರ ಜಿಲ್ಲೆಯ ಒಂದು ಕಡೆ ಎಸೆದಿದ್ದಾನೆ.
Related Articles
ಕೊನೆಗೂ ಪ್ರಕರಣ ಬೆಳಕಿಗೆ ಬಂದಿದ್ದು ನವೆಂಬರ್ 8 ರಂದು ಸೀತಾಪುರ ಪೊಲೀಸರು ಸ್ನೇಹಾ ಮೃತದೇಹದ ಭಾಗಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತನ್ನ ಪತ್ನಿಯನ್ನು ತಾನೇ ಕೊಲೆ ಮಾಡಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿ ಪಂಕಜ್ ಮೌರ್ಯ ಹಾಗೂ ಆತನ ಸ್ನೇಹಿತ ದುರ್ಜನ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಶೃಂಗೇರಿ: ಈಡೇರದ ಆಸ್ಪತ್ರೆಯ ಕನಸು, ತಮಟೆ ಬಾರಿಸಿ ಹೋರಾಟಕ್ಕೆ ಮುಂದಾದ ಯುವಕರು