Advertisement

ಉತ್ತರಾಖಂಡ: ಹಸುರು ತೆರಿಗೆ ಪ್ರಸ್ತಾವ

11:39 PM Sep 20, 2022 | Team Udayavani |

ಉತ್ತರಾಖಂಡ್‌: ರಾಜ್ಯವನ್ನು ಪ್ರವೇಶಿಸುವ ಖಾಸಗಿ ವಾಹನಗಳಿಗೆ ಹಸುರು ತೆರಿಗೆ (ಗ್ರೀನ್‌ ಟ್ಯಾಕ್ಸ್‌) ಉತ್ತರಾಖಂಡ ಸರಕಾರ ಚಿಂತನೆ ನಡೆಸಿದೆ.

Advertisement

ಮಂಗಳವಾರ ಈ ಸಂಬಂಧ ಮಾತನಾಡಿರುವ ಅಲ್ಲಿನ ಸಾರಿಗೆ ಸಚಿವ ಚಂದನ್‌ ರಾಮದಾಸ್‌, ಈ ಮೂಲಕ ಸಂಗ್ರಹವಾಗುವ ತೆರಿಗೆ ಹಣವನ್ನು ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಈ ಕುರಿತಾಗಿ ಪ್ರಸ್ತಾವವನ್ನು ಸಿದ್ಧಪಡಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ. ಸಚಿವ ಸಂಪುಟ ಒಪ್ಪಿಗೆ ಪಡೆದ ಬಳಿಕ ನಿಯಮ ಜಾರಿಗೆ ಬರಲಿದೆ. ಹೊರಗಿನಿಂದ ಬರುವ ವಾಣಿಜ್ಯ ವಾಹನಗಳಿಗೆ ಪ್ರಸ್ತುತ ಪ್ರವೇಶ ತೆರಿಗೆ ಪಡೆಯಲಾಗುತ್ತಿದೆ. ಆದರೆ ಹಸುರು ತೆರಿಗೆ ವಾಣಿಜ್ಯ ಹಾಗೂ ಖಾಸಗಿ ವಾಹನಗಳಿಗೆ ವಿಧಿಸುವ ಉದ್ದೇಶ ಅಲ್ಲಿನ ರಾಜ್ಯ ಸರಕಾರದ್ದು.

Advertisement

Udayavani is now on Telegram. Click here to join our channel and stay updated with the latest news.

Next