Advertisement
ಈ ಬಗ್ಗೆ ರಾಜ್ಯ ಕಾರ್ಯದರ್ಶಿ ರಾಧಾ ರತೌರಿ ಮಾಹಿತಿ ನೀಡಿದ್ದು, ಈಗಾಗಲೇ ರಾಜ್ಯದಲ್ಲಿ 1 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಕಾಳ್ಗಿಚ್ಚು ಹಬ್ಬಿದ್ದು, 5 ಮಂದಿ ಬಲಿಯಾಗಿದ್ದಾರೆ. ಈ ಹಿನ್ನೆಲೆ ಕಾಳ್ಗಿಚ್ಚು ಶಮನಕ್ಕೆ ಮೊದಲ ಬಾರಿಗೆ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಐಐಟಿ ಕಾನ್ಪುರದ ಮೋಡ ಬಿತ್ತನೆ ಯೋಜನೆ ಯನ್ನು ಪೌರಿಯಲ್ಲಿ ಪ್ರಯೋಗಿಸಿ ಮಳೆಯಾಗಿಸಿ ಕಾಳ್ಗಿಚ್ಚನ್ನು ನಂದಿಸಲು ಯೋಜಿಸಿದ್ದೇವೆ ಎಂದಿದ್ದಾರೆ.
ಉತ್ತರಾಖಂಡದ ಕಾಳ್ಗಿಚ್ಚಿನ ಫೋಟೋವನ್ನು ಬಳಸಿ ಜಾಲತಾಣ ದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದಕ್ಕೆ ಬಿಹಾರದ ಮೂವರನ್ನು ಉತ್ತರಾಖಂಡದ ಪೊಲೀಸರು ಅರಣ್ಯ ಕಾಯ್ದೆಯ ಸೆಕ್ಷನ್ 26ರ ಅನ್ವಯ ಬಂಧಿಸಿದ್ದಾರೆ.