ಹೊಸದಿಲ್ಲಿ: ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಉತ್ತರಾಖಂಡ ಬಿಜೆಪಿಯು ತಮ್ಮ ಸಚಿವನನ್ನೇ ಉಚ್ಛಾಟನೆ ಮಾಡಿದೆ. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಆಂತರಿಕ ಕಚ್ಚಾಟದ ಹಿನ್ನೆಲೆಯಲ್ಲಿ ಬಿಜೆಪಿ ಸಚಿವ ಹರಕ್ ಸಿಂಗ್ ರಾವತ್ ಅವರನ್ನು ಪಕ್ಷದಿಂದ ಭಾನುವಾರ ಉಚ್ಚಾಟಿಸಿದೆ.
ಉತ್ತಾರಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಹರಕ್ ಸಿಂಗ್ ರಾವತ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದಾಗಿ ತಿಳಿಸಿದೆ.
ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಜೆಪಿ ಆರು ವರ್ಷಗಳ ಕಾಲ ರಾವತ್ ಅವರನ್ನು ತನ್ನ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಿದೆ.
ಇದನ್ನೂ ಓದಿ:ಕೋವಿಡ್: ತಗ್ಗಿತೇ 3ನೇ ಅಲೆಯ ತೀವ್ರತೆ?
Related Articles
ಅವರು ತಮ್ಮ ಕುಟುಂಬದ ಹಲವಾರು ಸದಸ್ಯರಿಗೆ ಟಿಕೆಟ್‌ಗಾಗಿ ಒತ್ತಾಯಿಸುತ್ತಿದ್ದರು, ಅದಲ್ಲದೆ ರಾವತ್ ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.