Advertisement

ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಪರಿಣಾಮಕಾರಿ: ಡಿಸಿ

11:36 AM Oct 17, 2021 | Team Udayavani |

ದಾಂಡೇಲಿ: ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮೀಣ ಭಾಗದ ಜನರು ಸಣ್ಣ ಪುಟ್ಟ ಸಮಸ್ಯೆಗಳು ಎದುರಾದಾಗ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಹೇಳಿದರು.

Advertisement

ಅವರು ಶನಿವಾರ ದಾಂಡೇಲಿ ತಾಲೂಕಿನ ಕೇಗದಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂಥಹ ಕಾರ್ಯಕ್ರಮಗಳ ಮೂಲಕ ಎಲ್ಲ ಅಧಿಕಾರಿಗಳು ಒಂದೆಡೆ ಸೇರುವುದರಿಂದ ಸ್ಥಳೀಯವಾಗಿ ಇರುವಂತಹ ಸಮಸ್ಯೆಗಳ ವಾಸ್ತವಿಕತೆಯನ್ನು ಅರಿತು, ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದರ ಜೊತೆಯಲ್ಲಿ ಸ್ಥಳೀಯವಾಗಿ ಆಗಬೇಕಾದ ಕೆಲಸ ಕಾರ್ಯಗಳು ಮತ್ತು ಮುಖ್ಯವಾದ ಬೇಡಿಕೆಗಳನ್ನು ಈಡೇರಿಸಲು ಅಗತ್ಯವಾದ ಕ್ರಮವನ್ನು ಕೈಗೊಳ್ಳಲು ಈ ಕಾರ್ಯಕ್ರಮ ಬಹು ಪ್ರಯೋಜನಕಾರಿಯಾಗಿದೆ ಎಂದರು. ಸರಕಾರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳ ಮಾಹಿತಿಯ ಜೊತೆಗೆ ಸೌಲಭ್ಯಗಳನ್ನು ಪಡೆದುಕೊಳ್ಳುವಿಕೆಯ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ಆಯಾಯ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡಿದರು. ವೇದಿಕೆಯಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ಅಂಬಿಕಾನಗರ ಗ್ರಾಮ ಪಂಚಾಯ್ತು ಅಧ್ಯಕ್ಷೆ ಬಾಗು ಬಾಯಿ ತಾಟೆ, ಉಪಾಧ್ಯಕ್ಷರಾದ ವಿಠ್ಠಲ ಮಿಶಾಲೆ, ಗ್ರಾಮ ಪಂಚಾಯ್ತು ಸದಸ್ಯೆ ಅಮೀನಾ ಹಿಂಬ್ರಾನ್, ಕೆಪಿಸಿಯ ಕಾರ್ಯನಿರ್ವಾಹಕ ಅಭಿಯಂತರರಾದ ರಾಜಶೇಖರ, ಸಿಪಿಐ ಮೋತಿಲಾಲ್ ಪವಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ ಸ್ವಾಗತಿಸಿದರು. ಶಿಕ್ಷಕ ರಮೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸ್ಥಳೀಯ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಮುಂದೆ ಗ್ರಾಮಕ್ಕೆ ಬೇಕಾದ ಅವಶ್ಯಕತೆಗಳ ಬಗ್ಗೆ ಹಾಗೂ ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಬಹುಮುಖ್ಯವಾಗಿ ಹಿಂದು ಸ್ಮಶಾನ ಭೂಮಿಯ ಬಗ್ಗೆ,  ಕೆಪಿಸಿ ಮತ್ತು ಅರಣ್ಯ ಇಲಾಖೆಯ ಯೋಜನೆಯಿಂದ ಭೂಮಿ ಕಳೆದುಕೊಂಡ ಕುಟುಂಬಗಳ ಯುವಕರಿಗೆ ಕೆಪಿಸಿಯಲ್ಲಿ ಮೊದಲ ಆಧ್ಯತೆಯಲ್ಲಿ ಉದ್ಯೋಗ ನೀಡಬೇಕು. ಆನೆ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟವರ್ ನಿಮರ್ಿಸಬೇಕು. ಕೇಗದಾಳಕ್ಕೆ ಅಗತ್ಯವಾಗಿ ಬೇಕಾಗಿರುವ ಸೇತುವೆ ನಿಮರ್ಾಣ, ಗ್ರಾಮದಲ್ಲಿರುವ ಚರ್ಚ್, ವಾಲ್ಮೀಕಿ ದೇವಸ್ಥಾನ ಪುನರ್ ರಚನೆ, ಕೆಪಿಸಿಯಿಂದ ಉಚಿತ ವಿದ್ಯುತ್ ಪೊರೈಕೆಗೆ ಅಗತ್ಯ ಕ್ರಮವನ್ನು ಕೈಗೊಳ್ಳುವುದು, ಉದರ್ು ಶಾಲೆ ತೆರೆಯುವುದು, ರಸ್ತೆ ಅಗಲೀಕರಣ, ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳುವುದು, ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸಾರಿಗೆ ಬಸ್ಸಿನ ಸೌಲಭ್ಯವನ್ನು ಕಲ್ಪಿಸುವುದು, ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೆಪಿಸಿಯಿಂದ ಕ್ರೀಡಾ ಮೈದಾನ ನಿರ್ಮಿಸಿಕೊಡುವುದು ಹೀಗೆ ಮೊದಲಾದ ಬೇಡಿಕೆಗಳ ಅಹವಾಲನ್ನು ಸ್ಥಳೀಯರು ಜಿಲ್ಲಾಧಿಕಾರಿಯವರ ಮುಂದಿಟ್ಟರು.

Advertisement

ನಂತರದಲ್ಲಿ ಜಿಲ್ಲಾಧಿಕಾರಿಯವರು ಶಾಲೆ, ಅಂಗನವಾಡಿ ಕೇಂದ್ರ, ಸ್ಮಶಾನ ಭೂಮಿ, ಘನತ್ಯಾಜ್ಯ ವಿಲೇವಾರಿ ಘಟಕ, ಜಲಜೀವನ್ ಮಿಷನ್, ಸೇತುವೆ ಇತ್ಯಾದಿ ಸ್ಥಳಗಳಿಗೆ ಅಧಿಕಾರಿಗಳು ಹಾಗೂ ಸ್ಥಳೀಯರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಜೆ ಬೀದಿ ದೀಪ, ಕುಡಿಯುವ ನೀರು, ವಿಕಲ ಚೇತನರ ಸೌಲಭ್ಯಗಳ ಪರಿಶೀಲನೆ, ಪಹಣಿ ಪತ್ರದ ಬಗ್ಗೆ, ಪಿಂಚಣಿ ಪ್ರಮಾಣ ಪತ್ರ, ಪಡಿತರ ಚೀಟಿ, ಆಶ್ರಯ ಯೋಜನೆ, ಸರಕಾರಿ ಜಮೀನಿನ ಒತ್ತುವರಿ ಬಗ್ಗೆ ಅಧಿಕಾರಿಗಳೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಪರಸ್ಪರ ಚರ್ಚೆ ನಡೆಸಿದರು. ಇದಾದ ಬಳಿಕ ಗ್ರಾಮ ಪಂಚಾಯ್ತು ಸದಸ್ಯರೊಂದಿಗೆ ಹಾಗೂ ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ತಪಾಸಣೆ ಹಾಗೂ ಆದಾರ್ ಕಾರ್ಡಿನ ನೊಂದಣಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಹಳ್ಳಿಯ ರೈತರೊಂದಿಗೆ ಹಾಗೂ ರೈತರ ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಸರಳತೆ ಮತ್ತು ಸಹೃದಯಿ ನಡವಳಿಕೆಗೆ ಅವರಿಗೆ ಅವರೆ ಸಾಟಿ ಎಂಬಂತಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next