Advertisement

ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜ: ಜೈಲು ಹಕ್ಕಿಗಳ ರಾಷ್ಟ್ರ ಸೇವೆ !

12:11 PM Aug 07, 2022 | Team Udayavani |

ಲಕ್ನೋ: ಸ್ವಾತಂತ್ರ್ಯ ಅಮೃತೋತ್ಸವದಲ್ಲಿ ಜೈಲು ಹಕ್ಕಿಗಳು ಹೇಗೆ ಪಾಲ್ಗೊಳ್ಳಬಹುದು? ಇಂಥದೊಂದು ಪ್ರಶ್ನೆಗೆ ಉತ್ತರ ಪ್ರದೇಶದ ಮಹಿಳಾ ಜೈಲುಗಳ ಹಕ್ಕಿಗಳು ‘ನಾವು ಧ್ವಜ ತಯಾರಿಸಿ ಕೊಡುತ್ತೇವೆ, ನೀವು ಹಾರಿಸಿ’ ಎಂದಿದ್ದಾರೆ.

Advertisement

ಈ ವರ್ಷ ವಿಶೇಷವಾಗಿ ಎಲ್ಲರ ಮನೆ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಗಳಿಗೂ ಬೇಡಿಕೆ ಹೆಚ್ಚಾಗಿದೆ.

ಇದನ್ನೇ ಆಧಾರವಾಗಿಟ್ಟುಕೊಂಡು ಉತ್ತರ ಪ್ರದೇಶದ ವಿವಿಧ ಜೈಲುಗಳ ಹಕ್ಕಿಗಳು ಆಗಸ್ಟ್‌ 15 ರೊಳಗೆ ಸುಮಾರು 2 ಲಕ್ಷ ರಾಷ್ಟ್ರ ಧ್ವಜಗಳನ್ನು ಸಿದ್ಧಪಡಿಸಿಕೊಡಲು ಮುಂದಾಗಿದ್ದಾರೆ.

ಈಗಾಗಲೇ ರಾಷ್ಟ್ರಧ್ವಜ ತಯಾರಿ ಕಾರ್ಯ ಭರದಿಂದ ಸಾಗಿದೆ. ಈ ರಾಷ್ಟ್ರ ಧ್ವಜಗಳು ಮಾರುಕಟ್ಟೆಯಲ್ಲಿ ಖರೀದಿಗೂ ಲಭ್ಯವಾಗಲಿದೆ.

ಲಕ್ನೋ, ಶಹಜಾನ್‌ಪುರ್‌, ಬರೇಲಿ, ಮೀರತ್‌, ಬಹರಿಚ್‌, ಗಾಝಿಯಾಬಾದ್‌, ಆಗ್ರಾ ಸೇರಿದಂತೆ ವಿವಿಧ ಜೈಲುಗಳ ನೂರಾರು ಕೈದಿಗಳು ಈ ರಾಷ್ಟ್ರ ಧ್ವಜ ತಯಾರಿಸುವ ರಾಷ್ಟ್ರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next