ಉತ್ತರಪ್ರದೇಶ: ತನ್ನ ಪತಿ ತ್ರಿವಳಿ ತಲಾಖ್ ನೀಡಿದ ಹಿನ್ನೆಲೆ ಮನನೊಂದ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಧರ್ಮವನ್ನು ಸ್ವೀಕರಿಸಿ, ರುಬಿನಾ ಎಂಬ ತನ್ನ ಹೆಸರನ್ನು ಪುಷ್ಪಾ ಎಂದು ಬದಲಾಯಿಸಿ, ತನ್ನ ಮಾಜಿ ಪತಿಯ ಹಿಂದೂ ಗೆಳೆಯನನ್ನು ವಿವಾಹವಾಗಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ್ ಅಂಕಿತಾ ಪ್ರಕರಣ: ಮಗನ ಬಂಧನದ ಬೆನ್ನಲ್ಲೇ ಬಿಜೆಪಿ ಮುಖಂಡ ಆರ್ಯ ಉಚ್ಛಾಟನೆ
ಉತ್ತರಾಖಂಡದ ಹಲ್ದ್ವಾನಿ ನಿವಾಸಿ ಶೋಯೆಬ್ ಎಂಬಾತನನ್ನು ರುಬಿನಾ ಪ್ರೀತಿಸಿ ಸುಮಾರು 9 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮದುವೆಯಾದ ಕೆಲವು ವರ್ಷಗಳ ನಂತರ ದಂಪತಿಗಳ ನಡುವೆ ಜಗಳ ಪ್ರಾರಂಭವಾಯಿತು. ದಿನವೂ ಶೋಯೆಬ್ ರುಬಿನಾಳಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಒಂದು ವಾರದ ಹಿಂದೆ ಶೋಯೆಬ್ ಮತ್ತು ರುಬಿನಾ ನಡುವೆ ಮತ್ತೆ ಜಗಳವಾಗಿತ್ತು. ಇದಾದ ನಂತರ ಶೋಯೆಬ್ ಆಕೆಯ ಮೇಲೆ ಹಲ್ಲೆ ನಡೆಸಿ ತ್ರಿವಳಿ ತಲಾಖ್ ನೀಡಿದ್ದಾನೆ.
ರುಬಿನಾ 5 ವರ್ಷಗಳ ಹಿಂದೆ ಬರೇಲಿಯ ಹೊರವಲಯದಲ್ಲಿರುವ ನವಾಬ್‌ಗಂಜ್ ನಿವಾಸಿ ಪ್ರೇಂಪಾಲ್ ಅವರನ್ನು ಭೇಟಿಯಾಗಿದ್ದರು. ಅವರು ರುಬಿನಾಳ ಗಂಡನ ಸ್ನೇಹಿತರಾಗಿದ್ದರು. ಆಕೆಯ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿದ ನಂತರ ರುಬಿನಾ ಪ್ರೇಂಪಾಲ್ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಬಳಿಕ ರುಬಿನಾ ಹಿಂದೂ ಧರ್ಮವನ್ನು ಸ್ವೀಕರಿಸಿ, ಪ್ರೇಂಪಾಲ್ ನನ್ನು ಮದುವೆಯಾಗಿದ್ದಾರೆ. ಅಲ್ಲದೆ, ತನ್ನ ಹೆಸರನ್ನು ಪುಷ್ಪಾ ದೇವಿ ಎಂದು ಬದಲಾಯಿಸಿಕೊಂಡಿದ್ದಾರೆ.