ಮುಜಫರನಗರ : ವ್ಯಕ್ತಿಯೊಬ್ಬನೊಂದಿಗೆ ಮನೆ ಬಿಟ್ಟು ಓಡಿ ಹೋದ ಕಾರಣಕ್ಕೆ 17ರ ಹರೆಯದ ಹುಡುಗಿಯ ಮೇಲೆ ಆಕೆಯ ತಂದೆ, ಅಣ್ಣ ಮತ್ತು ಇಬ್ಬರು ಚಿಕ್ಕಪ್ಪ ಗ್ಯಾಂಗ್ ರೇಪ್ ಎಸಗಿದ್ದಾರೆ ಎಂಬ ಘಟನೆಯೊಂದು ಮುಜಫರನಗರದ ದಂಧೇಡಾ ಗ್ರಾಮದಿಂದ ವರದಿಯಾಗಿದೆ.
ತನ್ನ ಮನೆಯವರೇ ತನ್ನ ಮೇಲೆ ಗ್ಯಾಂಗ್ ರೇಪ್ ನಡೆಸಿದರು ಎಂದು ಅಪ್ರಾಪ್ತ ವಯಸ್ಸಿನ ಹುಡುಗಿಯು ಕೊಟ್ಟ ದೂರಿನ ಪ್ರಕಾರ ಪೊಲೀಸರು ಎಲ್ಲ ನಾಲ್ಕು ಅತ್ಯಾಚಾರಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹುಡುಗಿಯು ತನ್ನದೇ ಗ್ರಾಮದ (ದಾಂಧೇಡ್), ಮೂರು ಮಕ್ಕಳ ತಂದೆಯಾಗಿರುವ, 32ರ ಹರೆಯದ ಪುರುಷನೊಂದಿಗೆ ಓಡಿ ಹೋಗಿದ್ದಳು.
ಈ ಜೋಡಿ ಈ ಹಿಂದೆ ಈ ವರ್ಷ ಜುಲೈ ಮತ್ತು ಅಕ್ಟೋಬರ್ ನಲ್ಲಿ ಒಟ್ಟು ಎರಡು ಬಾರಿ ಓಡಿ ಹೋಗಿತ್ತು. ಹುಡುಗಿಯ ಮನೆಯವರು ಬಾಲಕಿಯ ಅಪಹರಣದ ಬಗ್ಗೆ ಪೊಲೀಸರಿಗೆ ಎರಡು ಬಾರಿಯೂ ದೂರು ನೀಡಿದ್ದರು.
Related Articles
ತನ್ನ ಮನೆಯವರು ಎರಡನೇ ಬಾರಿ ಆರೋಪಿ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ನೀಡಿದಾಗ, ಬಾಲಕಿಯು ಅಲಹಾಬಾದ್ ಹೈಕೋರ್ಟ್‌ಗೆ ನ.2ರಂದು ಅರ್ಜಿ ಹಾಕಿ ನರ್ಸಿಂಗ್ ಹೋಮ್ ಒಂದರಲ್ಲಿ ತನ್ನ ಮನೆಯವರೇ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿದ್ದಳು. ಮಾತ್ರವಲ್ಲದೇ ತನ್ನ ಮನೆಯವರು ತನಗೆ ಬಲವಂತದಿಂದ ಅಬಾರ್ಶನ್ ಮಾಡಿಸಿದ್ದಾರೆ ಎಂದೂ ಆಕೆ ದೂರಿದ್ದಳು.
ಪೊಲೀಸರು ಎಲ್ಲ ನಾಲ್ಕು ಆರೋಪಿಗಳ ವಿರುದ್ಧ ಐಪಿಸಿ ಸೆ.376-ಡಿ (ಗ್ಯಾಂಗ್ ರೇಪ್) ಮತ್ತು ಸೆ.313 (ಮಹಿಳೆಯ ಒಪ್ಪಿಗೆ ಇಲ್ಲದೆ ಅಬಾರ್ಶನ್ ಮಾಡಿಸುವುದು) ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ಈ ನಡುವೆ ಹುಡುಗಿಯ ತಾಯಿ ಮತ್ತು ಅತ್ತಿಗೆ, ತಮ್ಮ ಮನೆಯವರ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಮತ್ತು ನಿರಾಧಾರವಾದುದೆಂದು ಹೇಳಿದ್ದಾರೆ.