Advertisement
ಪ್ರಧಾನಿ ನರೇಂದ್ರ ಮೋದಿಯವರು ನ.25ರಂದು ಜೇವರ್‌ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎನ್‌ಐಎ)ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
Related Articles
Advertisement
ಕೆಲ ದಿನಗಳ ಹಿಂದಷ್ಟೇ ಪ್ರಧಾನಿಯವರು ಖುಷಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಇದರ ಜತೆಗೆ ಅಯೋಧ್ಯೆಯಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಲಕ್ನೋ ಮತ್ತು ವಾರಾಣಸಿ ಹಾಲಿ ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಇದೇ ಮೊದಲುದೇಶದಲ್ಲಿ ಮೊದಲ ಬಾರಿಗೆ ವಿಮಾನ ನಿಲ್ದಾಣವೊಂದರಲ್ಲಿ ಏಕೀಕೃತ ಬಹುಹಂತದ ಕಾರ್ಗೊ ಹಬ್ ನೂತನ ವಿಮಾನ ನಿಲ್ದಾಣದಲ್ಲಿ ಇರಲಿದೆ. ಇದರಿಂದಾಗಿ ಕಾರ್ಗೊ ನಿರ್ವಹಣೆ ಮತ್ತು ವೆಚ್ಚವನ್ನು ನಿಯಂತ್ರಿಸುವತ್ತ ಗಮನ ಹರಿಸಲಾಗಿದೆ. ಮೊದಲ ಹಂತದಲ್ಲಿ 20 ಲಕ್ಷ ಮೆಟ್ರಿಕ್ ಟನ್ ಕಾರ್ಗೊ ನಿರ್ವಹಿಸಲು ಸಾಧ್ಯವಾಗಲಿದೆ. ಮುಂದಿನ ಹಂತದಲ್ಲಿ ಅದನ್ನು 80 ಲಕ್ಷ ಟನ್ ವರೆಗೆ ವಿಸ್ತರಿಸುವ ಅವಕಾಶ ಉಂಟು.