Advertisement

Uttar Pradesh: ಹೋಟೆಲ್‌ಗ‌ಳಲ್ಲಿ ಇನ್ನು ಮಾಸ್ಕ್, ಗ್ಲೌವ್ಸ್‌ ಕಡ್ಡಾಯ!

08:14 PM Sep 24, 2024 | Team Udayavani |

ಲಕ್ನೋ: ಹೋಟೆಲ್‌ಗ‌ಳಲ್ಲಿ ಅಡುಗೆ ಮಾಡುವವರು ಹಾಗೂ ಅದನ್ನು ತಂದು ಬಡಿಸುವವರು ತಮ್ಮ ಕೆಲಸದ ಸಮಯದಲ್ಲಿ ಮಾಸ್ಕ್ ಹಾಗೂ ಗ್ಲೌಸ್‌ ಧರಿಸುವುದನ್ನು ಉತ್ತರ ಪ್ರದೇಶ ಸರ್ಕಾರ ಕಡ್ಡಾಯ ಮಾಡಿದೆ. ರಾಜ್ಯಾದ್ಯಂತ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು, ಮಾಸ್ಕ್, ಗ್ಲೌಸ್‌ ಧರಿಸುವುದು ಮತ್ತು ಸಿಸಿಟೀವಿಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.

Advertisement

ಅಲ್ಲದೇ ಹೋಟೆಲ್‌ಗ‌ಳನ್ನು ನಡೆಸುವವರು, ಮಾಲೀಕರು ಮತ್ತು ಮ್ಯಾನೇಜರ್‌ಗಳು ತಮ್ಮ ಹೆಸರುಗಳನ್ನು ಪ್ರದರ್ಶನ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, “ಜ್ಯೂಸು, ಮಸೂರ ಬೇಳೆ ಮತ್ತು ಬ್ರೆಡ್‌ಗಳಲ್ಲಿ ಮಾನವ ತ್ಯಾಜ್ಯವನ್ನು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಯೋಗಿ ಆದಿತ್ಯನಾಥ್‌ ಹೇಳಿದರು. ತಿರುಪತಿ ಲಡ್ಡುವಿನಲ್ಲಿ ಕಲಬೆರಕೆಯಾಗಿದೆ ಎಂಬ ವಿವಾದದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next