Advertisement

ಮಾಸ್ಕ್ ಧರಿಸದೇ ಹೊರಗೆ ಬಂದರೆ ಕಾನೂನು ಕ್ರಮ: ಜನರಿಗೆ ಉತ್ತರಪ್ರದೇಶ ಸರ್ಕಾರ

09:16 AM Apr 10, 2020 | Nagendra Trasi |

ಲಕ್ನೋ: ಮಾರಣಾಂತಿಕ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಯಿಂದ ಹೊರ ಬರುವ ವೇಳೆ ಜನರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ.

Advertisement

ರಾಜ್ಯದ ಮುಖ್ಯ (ಗೃಹ) ಕಾರ್ಯದರ್ಶಿ ಅವಿನಾಶ್ ಅವಾಸ್ಥಿ ಸುದ್ದಿಗಾರರ ಜತೆ ಮಾತನಾಡುತ್ತ, ರಾಜ್ಯದ ಜನರು ಮಾಸ್ಕ ಧರಿಸುವುದು ಕಡ್ಡಾಯ ಮಾಡಲಾಗಿದೆ. ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ.

ಜನರು ಮನೆಯಿಂದ ಹೊರ ಬರುವ ವೇಳೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರು ಮಡಿಕೆಯ ಮಾಸ್ಕ್ ಗಳನ್ನು ಧರಿಸುವಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ಜನರು ಮನೆಯಲ್ಲಿಯೇ ತಯಾರಿಸಿದ ಮಾಸ್ಕಗಳನ್ನು ಕೂಡಾ ಧರಿಸಬಹುದಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next