Advertisement

Uttar Pradesh ಮದ್ರಸಾ ಕಾಯ್ದೆ ಅಸಾಂವಿಧಾನಿಕ: ಹೈಕೋರ್ಟ್‌

12:26 AM Mar 23, 2024 | Team Udayavani |

ಲಕ್ನೋ: 2004ರ ಉತ್ತರಪ್ರದೇಶ ಮದ್ರಸಾ ಶಿಕ್ಷಣ ಕಾಯ್ದೆ ಅಸಾಂವಿಧಾನಿಕ ಎಂದು ಅಲಹಾಬಾದ್‌ ಹೈಕೋರ್ಟ್‌ನ ಲಕ್ನೋ ಪೀಠ ಶುಕ್ರವಾರ ತೀರ್ಪು ನೀಡಿದೆ. ಜತೆಗೆ ಮದ್ರಸಾಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.

Advertisement

ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಮತ್ತು ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ನೀಡುವ ನಿಯಮದಲ್ಲಿ ಇದರ ಪಾತ್ರವನ್ನು ಪ್ರಶ್ನಿಸಲಾಗಿತ್ತು. ಈ ಕಾಯ್ದೆ ಜಾತ್ಯತೀತ ವ್ಯವಸ್ಥೆಗೆ ಭಂಗ ತರುತ್ತದೆ ಎಂದಿದೆ ಪೀಠ. ಉ.ಪ್ರ.ಮದ್ರಸಾಗಳ ಮೇಲೆ ತನಿಖೆಗೆ ಸರಕಾರ ರಚಿಸಿದ್ದ ಎಸ್‌ಐಟಿ ಕಳೆದ ವರ್ಷ ವರದಿ ನೀಡಿತ್ತು.ಗಡಿಯಲ್ಲಿರುವ 80 ಮದ್ರಸಾ ಗಳು 100 ಕೋಟಿ ರೂ.ಗೂ ಹೆಚ್ಚು ವಿದೇಶಿ ಹಣವನ್ನು ಪಡೆದುಕೊಂಡಿವೆ ಎಂದು ಸೂಚಿಸಿದ್ದ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದೆ.

ಏನಿದು ಕಾಯ್ದೆ?

2004ರ ಕಾಯ್ದೆ ಮದ್ರಸಾಗಳಿಗೆ ಶೈಕ್ಷಣಿಕ ಸಂಸ್ಥೆಗಳಿಗೆ ಮಾನ್ಯತೆ ಹಾಗೂ 10ನೇ ತರಗತಿವರೆಗೆ ಶಿಕ್ಷಣ ನೀಡುವ ಅಧಿಕಾರ ನೀಡಿತ್ತು. ಆದರೆ, ಜೈನ, ಸಿಕ್ಖ್, ಕ್ರೈಸ್ತರು ಅಲ್ಪಸಂಖ್ಯಾಕರಾದರೂ ಅವರ ಶಿಕ್ಷಣ ಏಕೆ ಅಲ್ಪ ಸಂಖ್ಯಾಕ ಸಚಿವಾಲಯದಡಿ ಇಲ್ಲ ಎಂಬ ವಿವಾದ ಸೃಷ್ಟಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next