Advertisement

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಉಚಿತ ಲಸಿಕೆ ಅಭಿಯಾನ : ಯೋಗಿ ಆದಿತ್ಯನಾಥ್

11:22 AM Apr 21, 2021 | Team Udayavani |

ಲಕ್ನೊ : ಕೋವಿಡ್ ಸೋಂಕು ದೇಶದಲ್ಲಿ ಮತ್ತೆ ದಿನ ನಿತ್ಯ ಹಠಾತ್ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದೆ. ಇತ್ತ ದೇಶದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮೇ. 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.

Advertisement

ದೇಶದಲ್ಲಿ ಕೋವಿಡ್ ಸೋಂಕು ಮಿತಿ ಮೀರುತ್ತಿದ್ದು, ದೇಶದ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಸೇರಿ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ವೀಕೆಂಡ್ ಲಾಕ್ ಡೌನ್, ನೈಟ್ ಕರ್ಫ್ಯೂ ನಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿನ್ನೆ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಲಾಕ್ ಡೌನ್ ದೇಶಕ್ಕೆ ಈಗ ಅಗತ್ಯವಿಲ್ಲ, ಲಾಕ್ ಡೌನ್ ನನ್ನು ಕೊನೆಯ ಬ್ರಹ್ಮಾಸ್ತ್ರವಾಗಿ ಬಳಸಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ : ಸಮಾಜ ಬಾಂಧವರ ಯೋಗಕ್ಷೇಮ ಸಂಘದ ಮುಖ್ಯ ಧ್ಯೇಯ: ಚಂದ್ರಹಾಸ್‌ ಶೆಟ್ಟಿ

ಉತ್ತರ ಪ್ರದೆಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆಗಳು ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಕ್ಯಾಬಿನೆಟ್ ಸಚಿವರ ಜೊತೆ ವರ್ಚುವಲ್ ಸಭೆ ಕರೆದು ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಇನ್ನು, ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಅವರು ಘೋಷಿಸಿದ್ದಾರೆ.

Advertisement

ಈ ಬಗ್ಗೆ ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಉತ್ತರ ಪ್ರದೆಶದ ಆರೋಗ್ಯ ಸಚಿವ ಪ್ರತಾಪ್ ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.

ರಾಜ್ಯದ ಆರೋಗ್ಯ ಇಲಾಖೆ ಈಗಾಗಲೇ ಹಿರಿಯ ವೈದ್ಯಕೀಯ ತಜ್ಞರುಗಳ ಸಲಹೆಯೊಂದಿಗೆ ಮೇ. 1 ರಂದು ಉಚಿತ ಲಸಿಕೆ ಅಭಿಯಾನವನ್ನು ಆರಂಭಿಸಲು ರೂಪುರೇಷೆಯನ್ನು ಮಾಡುತ್ತಿದೆ. ಮಾತ್ರವಲ್ಲದೇ, ವೆಂಟಿಲೇಟರ್, ಹಾಸಿಗೆ ಹಾಗೂ ಕೋವಿಡ್ ಕೇಂದ್ರಗಳ ಹೆಚ್ಚಳದ ಬಗ್ಗೆಯೂ ಕೂಡ ಚಿಂತನೆ ಮಾಡುತ್ತಿದೆ ಎಂಬ ಮಾಹಿತಿಗಳನ್ನು ಸುದ್ದಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಹಳೆಯಂಗಡಿ ಸಿಡಿಲಿನ ಆಘಾತ: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಬಾಲಕ ಸಾವು!

Advertisement

Udayavani is now on Telegram. Click here to join our channel and stay updated with the latest news.

Next