Advertisement

ಯುಪಿಯಲ್ಲಿ ಮತ್ತೆ ಬುಲ್ಡೋಜರ್ ದಾಳಿ; ಅತೀಕ್ ಅಹ್ಮದ್ ಸಂಬಂಧಿಯ ಬಂಗಲೆ ಧ್ವಂಸ

02:42 PM Mar 01, 2023 | Team Udayavani |

ಲಕ್ನೋ: ಉತ್ತರಪ್ರದೇಶದಲ್ಲಿ ಹಾಡ ಹಗಲೇ ಕೊಲೆ ಪ್ರಕರಣದ ಸಾಕ್ಷಿಯೊಬ್ಬರ ಹತ್ಯೆ ಘಟನೆಯ ನಂತರ, ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ದರೋಡೆಕೋರ ಅತೀಕ್ ಅಹ್ಮದ್ ನ ಹತ್ತಿರದ ಸಂಬಂಧಿಯ ಬಂಗಲೆಯನ್ನು ಬುಲ್ಡೋಜರ್‌ಗಳ ದಾಳಿ ಮಾಡಿ ಧ್ವಂಸ ಮಾಡಲಾಗಿದೆ.

Advertisement

ಬೆಳಗ್ಗೆ ಶೂಟೌಟ್‌ ಬಳಿಕ ನಾಪತ್ತೆಯಾಗಿರುವ ಅತೀಕ್ ಅಹ್ಮದ್‌ನ ಮತ್ತೊಬ್ಬ ಆಪ್ತ ಸಹಾಯಕ ಜಾಫರ್ ಅಹ್ಮದ್‌ನ ಪ್ರಯಾಗ್‌ರಾಜ್‌ನಲ್ಲಿರುವ ಮನೆಯನ್ನು ಬುಲ್ಡೋಜರ್‌ಗಳು ಕೆಡವಿ ಹಾಕಿವೆ. ಬಂಗಲೆಯಲ್ಲಿ ಅತೀಕ್ ಅಹ್ಮದ್ ಅವರ ಪತ್ನಿ ಮತ್ತು ಮಗ ಕೂಡ ಇದ್ದರು ಎಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ ಬಂಗಲೆಯಲ್ಲಿ ತಪಾಸಣೆ ನಡೆಸಿದಾಗ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ.

2005 ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಅವರ ಹತ್ಯೆಯ ಸಾಕ್ಷಿ, ವಕೀಲ ಉಮೇಶ್ ಪಾಲ್, ಪ್ರಯಾಗ್‌ರಾಜ್‌ನಲ್ಲಿರುವ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಬಲಿಯಾಗಿದ್ದರು. ಐವರು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಆತನ ಭದ್ರತಾ ಸಿಬಂದಿಯೂ ಸಾವನ್ನಪ್ಪಿದ್ದರು.

ದರೋಡೆಕೋರ ಮತ್ತು ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅಹ್ಮದ್ ಅವರು ಹತ್ಯೆಯನ್ನು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆಯೇ ಪೊಲೀಸರು ಲಕ್ನೋದಲ್ಲಿರುವ ಅತೀಕ್ ಅಹ್ಮದ್ ನ ಮನೆಯ ಮೇಲೆ ದಾಳಿ ನಡೆಸಿ ಎರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Advertisement

ಅತಿಕ್ ಅಹ್ಮದ್ ಅವರ ಪ್ರತಿಸ್ಪರ್ಧಿಯಾಗಿದ್ದ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ ಹತ್ಯೆಯನ್ನು ಉಮೇಶ್ ಪಾಲ್ ವೀಕ್ಷಿಸಿದ್ದರು. ಅಹಮದಾಬಾದ್‌ನ ಜೈಲಿನಲ್ಲಿರುವ ಅತೀಕ್ ಅಹ್ಮದ್, ಪೊಲೀಸರ ಮುಂದೆ ಹೇಳಿಕೆ ದಾಖಲಿಸುವ ಮೊದಲು ಸಾಕ್ಷಿಯನ್ನು ಕೊಲ್ಲಲು ತನ್ನ ಹತ್ತಿರದ ಐದು ಅಥವಾ ಆರು ಸಹಚರರನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಅತಿಕ್ ಅಹ್ಮದ್, ಪುತ್ರ ಅಸದ್ ಅಹ್ಮದ್ ಮತ್ತು ಪತ್ನಿ ಮತ್ತು ಬಿಎಸ್ಪಿ ನಾಯಕಿ ಶೈಸ್ತಾ ಪರ್ವೀನ್ ಅವರನ್ನು ಹತ್ಯೆಯ ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ. ಸೋಮವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಒಬ್ಬ ಆರೋಪಿ ಹತನಾಗಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next