Advertisement
ಉತ್ತರಪ್ರದೇಶದಲ್ಲಿರುವ 92 ಉತ್ಪಾದಕ ಸಂಸ್ಥೆಗಳಿಗೆ, ತಮ್ಮ ವಸ್ತುಗಳನ್ನು ಹಿಂಪಡೆದು ಹೊಸತಾಗಿ ಪ್ಯಾಕ್ ಮಾಡಿ ಅಥವಾ ಲೋಪವನ್ನು ಸರಿ ಮಾಡಿ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ನ.18ರಂದು ಉತ್ತರಪ್ರದೇಶ ಸರ್ಕಾರ ಹಲಾಲ್ ಪ್ರಮಾಣಿತ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಆ ಬಳಿಕ 92 ದಾಳಿ ನಡೆಸಿ, 500 ಬಾರಿ ತಪಾಸಣೆ ಮಾಡಲಾಗಿದೆ. ಈ ವೇಳೆ 3000 ಕೆಜಿ ತೂಕದ, 7-8 ಲಕ್ಷ ರೂ. ಮೌಲ್ಯದ ಹಲಾಲ್ ಪ್ರಮಾಣೀಕೃತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿರುವ ಆಹಾರ ಭದ್ರತೆ ಮತ್ತು ಔಷಧ ಆಡಳಿತ ಆಯುಕ್ತೆ ಅನಿತಾ ಸಿಂಗ್, ಲಕ್ನೋದಲ್ಲಿರುವ ಐ-ಸಿಎಎಸ್‌ನ ನ್ಯಾಷನಲ್ ಅಕ್ರೆಡಿಷನ್ ಬೋರ್ಡ್ ಫಾರ್ ಸರ್ಟಿಫಿಕೇಷನ್ ಸಂಸ್ಥೆ ಸೇರಿ ಮೂರು ಸಂಸ್ಥೆಗಳಿಗೆ ಮಾತ್ರ ಹಲಾಲ್ ಪ್ರಮಾಣಪತ್ರ ನೀಡಲು ಅಧಿಕಾರವಿದೆ. ಆದರೆ 700ರಿಂದ 800 ಸಂಸ್ಥೆಗಳು ಅನಧಿಕೃತವಾಗಿ ಪ್ರಮಾಣ ಪತ್ರ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ. Advertisement
Uttar Pradesh: ಹಲಾಲ್ ಪ್ರಮಾಣಿತ ವಸ್ತುಗಳನ್ನು ಹಿಂಪಡೆಯಲು 15 ದಿನ ಗಡುವು
09:57 PM Nov 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.