Advertisement

ಕರಾವಳಿ ಅಭಿವೃದ್ಧಿಗೆ “ಉತ್ತಮ ಪ್ರಜಾಕೀಯ’

09:41 AM Apr 04, 2019 | Team Udayavani |

“ಕರಾವಳಿಗರು ಬುದ್ಧಿವಂತರು, ನಮ್ಮ ಪಕ್ಷದ ಸಿದ್ಧಾಂತಗಳು ಇಲ್ಲಿಯ ಮಂದಿಗೆ ಬಹುಬೇಗ ತಲುಪುತ್ತವೆೆ’ ಎಂದು ಉದಯವಾಣಿ ಜತೆ ಮಾತಿಗಿಳಿದಿದ್ದು ನಟ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ. ಪಕ್ಷದ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಅವರು ಮಾತನಾಡಿದರು.
ಹಿಂದೆ ಕೆಪಿಜೆಪಿ; ಈಗ ಯುಪಿಪಿ – ವ್ಯತ್ಯಾಸ?
ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ (ಕೆಪಿಜಿಪಿ) ಮುಗಿದ ಅಧ್ಯಾಯ. ನಮ್ಮ ತಣ್ತೀಕ್ಕೂ ಅವರ ಪಕ್ಷದ ತಣ್ತೀಕ್ಕೂ ಹೊಂದಾಣಿಕೆಯಾಗಲಿಲ್ಲ. ಸಹವಾಸ ಬೇಡ ಎಂದು ಹೊಸ ಪಕ್ಷ ಕಟ್ಟಿದ್ದೇವೆ.

Advertisement

ಯುಪಿಪಿ ಹೇಗೆ ಭಿನ್ನ?
ಚುನಾವಣೆಯಲ್ಲಿ ಸ್ಪರ್ಧೆಗೆ ಯಾವುದೇ ನಿಧಿ ಸಂಗ್ರಹ ಮಾಡುತ್ತಿಲ್ಲ. ಜನ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ? ನಿವಾರಣೆಗೆ ಹೇಗೆ ಸೇರಿದಂತೆ ಇತರ ಮುಖ್ಯ ವಿಚಾರಗಳ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳನ್ನು ಗೆಲ್ಲಿಸಿದ ಬಳಿಕ ನಮ್ಮ ಯೋಚನೆಗಳನ್ನು ಯೋಜನೆ ರೂಪದಲ್ಲಿ ತರಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ.

ನಿಮ್ಮ ತಣ್ತೀಗಳೇನು?
ಮತದಾರರು ಹೇಳಿದ ರೀತಿ ಕೆಲಸ ಮಾಡುವಂತಹ “ಕಾರ್ಮಿಕ’ರನ್ನು ಅಭ್ಯರ್ಥಿಗಳನ್ನಾಗಿಸಿದ್ದೇವೆ. ಸಂಪೂರ್ಣ ಅಧಿಕಾರವನ್ನು ರಾಜರ ಕೈಯಿಂದ ಪ್ರಜೆಗಳಿಗೆ ಬದಲಾಯಿಸುವ ತಣ್ತೀ ನಮ್ಮದು.

ಅಭಿಮಾನಿಗಳೆಲ್ಲರು ಮತ ಹಾಕುವರೇ?
ನಮ್ಮ ಪಕ್ಷಕ್ಕೇ ಮತ ಹಾಕಿ ಎಂದು ಆಗ್ರಹಪೂರ್ವಕ ಕೇಳುತ್ತಿಲ್ಲ. ನಮ್ಮ ವಿಚಾರಗಳು ಸರಿಯಿದ್ದರೆ, ಬದಲಾವಣೆ ಬೇಕು ಎಂದಾದರೆ ಮತ ಹಾಕಿ ಎನ್ನುತ್ತಿದ್ದೇವೆ. ಹೆಚ್ಚಿನ ಮಂದಿ ಮತದಾರರು ಸ್ಪಂದಿಸುತ್ತಿದ್ದಾರೆ.

ಮಂಗಳೂರಿನಲ್ಲಿ ಬೆಂಗಳೂರಿನವರ್ಯಾಕೆ?
ಸ್ಪರ್ಧಾಸಕ್ತರಾಗಿದ್ದ ಸ್ಥಳೀಯ ವ್ಯಕ್ತಿಯೊಬ್ಬರು ಕೊನೆಯ ಕ್ಷಣದಲ್ಲಿ ಹಿಂದೆ ಸರಿದರು. ಜನ ಸಂಪರ್ಕಕ್ಕೆ ಅಭ್ಯರ್ಥಿ ಮುಖ್ಯವಲ್ಲ. ಕೆಲಸ ಮುಖ್ಯವಾಗುತ್ತದೆ.

Advertisement

*ನೀವೇಕೆ ಸ್ಪರ್ಧಿಸುತ್ತಿಲ್ಲ?
ಪಕ್ಷದಲ್ಲಿ ನಾನು ಮಾಡಬೇಕಾದ ಕೆಲಸಗಳು ಹೆಚ್ಚಿವೆ. ತಜ್ಞರ ಸಮಿತಿ ಇದ್ದು, ಅವರಲ್ಲಿಯೂ ಚರ್ಚಿಸಬೇಕು. ಇದೇ ಕಾರಣಕ್ಕೆ ಸ್ಪರ್ಧಿಸಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ.

ನಿರೀಕ್ಷೆಯಂತೆ ಸ್ಥಾನ ಗಳಿಸದಿದ್ದರೆ ರಾಜಕೀಯದಿಂದ ಹಿಂದೆ ಸರಿಯುವಿರಾ?
ಖಂಡಿತಾ ಇಲ್ಲ. ನಮ್ಮ ಪಕ್ಕಕ್ಕೆ ಡೆಡ್‌ಲೈನ್‌ ಇಲ್ಲ. ಇಲ್ಲಿ ಅಭ್ಯರ್ಥಿ ಗೆಲ್ಲುವುದಲ್ಲ; ಜನ ಗೆಲ್ಲುವುದು. ಅಲ್ಲಿಯವರೆಗೂ ಸ್ಪರ್ಧಿಸುತ್ತಿರುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next