Advertisement

ಎಂಡಿಎಫ್ ಹೆಸರಿನಲ್ಲಿ ಬೆದರಿಕೆ ಪೋಸ್ಟ್‌ : ಕ್ರಮಕ್ಕೆ ಖಾದರ್‌ ಆಗ್ರಹ

07:10 PM May 07, 2022 | Team Udayavani |

ಮಂಗಳೂರು  : ಜಾಲತಾಣದಲ್ಲಿ ಮುಸ್ಲಿಂ ಡಿಫೆನ್ಸ್‌ ಫೋರ್ಸ್‌ (ಎಂಡಿಎಫ್) ಹೆಸರಿನಲ್ಲಿ ಬೆದರಿಕೆ ಹಾಗೂ ಎಚ್ಚರಿಕೆ ಪೋಸ್ಟ್‌ ಗಳು ಹರಿದಾಡುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಅವರನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್‌ ಒತ್ತಾಯಿಸಿದ್ದಾರೆ.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಸ್ವಾಸ್ಥ ಹಾಗೂ ಜನರ ನೆಮ್ಮದಿಯನ್ನು ಕೆಡಿಸುವ ಇಂಥ ಪೋಸ್ಟ್‌ಗಳನ್ನು ಹಾಕುವ ಯಾವುದೇ ಸಂಘಟನೆಗಳು ಅಥವಾ ವ್ಯಕ್ತಿಗಳಿರಲಿ ಅವರ ವಿರುದ್ಧ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಜಾಲತಾಣದಲ್ಲಿ ಯಾರದೋ ಹೆಸರಿನಲ್ಲಿ ಬೇರೆ ಯಾರೋ ಮಾಡಿರುವ ಸಾಧ್ಯತೆಗಳೂ ಇವೆ. ಇಂಥ ಕೃತ್ಯಗಳಿಗೆ ಕಡಿವಾಣ ಹಾಕಬೇಕಾದರೆ ಇಂತಹವರನ್ನು ಪತ್ತೆ ಹಚ್ಚಿ ಮಟ್ಟಹಾಕುವ ಕಾರ್ಯವನ್ನು ಸರಕಾರ, ಪೊಲೀಸ್‌ ಇಲಾಖೆ ಮಾಡಬೇಕು ಎಂದರು.

ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಪೋಷಕರು ಇದ್ದಾರೆ. ಸಾಮಾಜಿಕವಾಗಿ ಧಾರ್ಮಿಕ ಮುಖಂಡರು ಮಾರ್ಗದರ್ಶನ ನೀಡುತ್ತಾರೆ. ಎಲ್ಲೋ ಕುಳಿತು ಯಾರೋ ಎಚ್ಚರಿಕೆ ನೀಡಬೇಕಿಲ್ಲ. ಇಂಥ ಕೃತ್ಯಗಳಿಗೆ ಈಗಲೇ ಕಡಿವಾಣ ಹಾಕಿದರೆ ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ತಡೆಯಲು ಸುಲಭವಾಗುತ್ತದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.

ಇದನ್ನೂ ಓದಿ : 2500 ಕೋಟಿ ರೂ ಆರೋಪ: ಮಾಧ್ಯಮಗಳ ವಿರುದ್ಧವೇ ಯತ್ನಾಳ್ ಕಿಡಿ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಮುಖಂಡರಾದ ಸದಾಶಿವ ಉಳ್ಳಾಲ್‌, ಸಂತೋಷ್‌ ಕುಮಾರ್‌ ಶೆಟ್ಟಿ, ನೀರಜ್‌ಪಾಲ್‌, ನಝೀರ್‌ ಬಜಾಲ್‌ ,ನಜೀರ್‌ ಮಠ ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next