ಮಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಆಯಸ್ಸು 35 ದಿನಗಳು ಮಾತ್ರವಿದ್ದು, ಇನ್ನಾದರೂ ಉಳಿದಿರುವ ದಿನಗಳಲ್ಲಿ ಉತ್ತಮ ಕೆಲಸ ಮಾಡಿ ತನ್ನ ಕಪ್ಪು ಚುಕ್ಕೆಯನ್ನು ಕ್ಲೀನ್ ಮಾಡುವ ಬದಲು ಸರಕಾರ ತನ್ನ ಅಂಗಡಿ ಬಂದ್ ಮಾಡಿ ಚುನಾವಣೆಯಲ್ಲಿ ನಿರತವಾಗಿದೆ ಎಂದು ಶಾಸಕ ಯು.ಟಿ. ಖಾದರ್ ಅವರು ಸರಕಾರದ ವಿರುದ್ಧ ಟೀಕಾಪ್ರಹಾರಗೈದಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಯು.ಟಿ.ಖಾದರ್, ಪೌರ ಕಾರ್ಮಿಕರ ಸಮಸ್ಯೆ, ನೀರಿನ ಸಮಸ್ಯೆಯಿಂದ ಜನರು ಹತಾಶರಾಗಿದ್ದರೆ, ಜನಸಾಮಾನ್ಯರ ಬಗೆಗಿನ ನಿರ್ಲಕ್ಷ್ಯ ಧೋರಣೆಯನ್ನು ಸರಕಾರ ಮುಂದಿವರಿಸಿದ್ದು, ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವ ಪೌರ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಕೂಡಾ ಸಾಧ್ಯವಾಗಿಲ್ಲ ಎಂದು ದೂರಿದರು.
ಪೌರ ಕಾರ್ಮಿಕರ ಪ್ರತಿಭಟನೆಯಿಂದಾಗಿ ನಗರದಲ್ಲಿ ಸ್ವಚ್ಛತೆಯ ಜತೆಗೆ ಆರೋಗ್ಯದ ಸಮಸ್ಯೆಯ ಆತಂಕ ಎದುರಾಗಿದೆ. ಈಗಾಗಲೇ ಭ್ರಷ್ಟಾಚಾರದಿಂದ ಸರಕಾರ ಗಬ್ಬೆಸಿದ್ದರೆ, ಪೌರ ಕಾರ್ಮಿಕರ ಪ್ರತಿಭಟನೆಯಿಂದ ನಗರದಲ್ಲಿ ವಾಸನೆಯನ್ನು ಜನರು ಅನುಭವಿಸುವಂತಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಪ್ರಥಮ ಪದವಿ ತರಗತಿಗಳ -ಲಿತಾಂಶ ಬಾರದೆ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಆರ್‌ಟಿಓ ಕಚೇರಿಗೆ ಹೋದರೆ ಅಲ್ಲಿ ಆರ್‌ಸಿ ಪ್ರಿಂಟ್ ಮಾಡುವ ಕಾರ್ಡೇ ಇಲ್ಲ. ಆದರೆ ಬಿಜೆಪಿ ಸರಕಾರ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಿರತರಾಗಿದ್ದಾರೆ ಎಂದು ಯು.ಟಿ.ಖಾದರ್ ಅವರು ಹೇಳಿದರು.
Related Articles
ನಾನು ಬಾಲ್ಯದಲ್ಲಿ ಇತಿಹಾಸ ಕಲಿತವ. ಟಿಪ್ಪುಸುಲ್ತಾನರನ್ನು ಕೊಂದಿರುವುದು ಬ್ರಿಟಿಷರು ಎಂಬುದು ಗೊತ್ತು. ಆದರೆ ಹೊಸ ಇತಿಹಾಸ ಬರೆಯಲು ಹೊರಟಿರುವ ಬಗ್ಗೆ ಗೊತ್ತಿಲ್ಲ ಎಂದು ಪ್ರಸಕ್ತ ಪ್ರಚಲಿದಲ್ಲಿರುವ ಉರಿಗೌಡ, ನಂಜೇಗೌಡ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಪೂರ್ಣಿಮಾ ಹೆಗಲ ಮೇಲೆ ಕೈ ಇಟ್ಟು, ‘ನಮ್ಮ ಜೊತೆಯಲ್ಲೇ ಇದ್ದಾರೆ’ ಎಂದ ಬಿಎಸ್‌ವೈ