ಮಂಗಳೂರು: ಜಿಲ್ಲೆಯಲ್ಲಿ ಸಮಾಜದ್ರೋಹಿ ಶಕ್ತಿಗಳು ಹೆಚ್ಚಾಗುತ್ತಿದೆ. ಕಾನೂನಿನ ಭಯವಿಲ್ಲದೇ ರೌಡಿಗಳು ಅಟ್ಟಹಾಸ ತೋರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ ಖಾದರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತಾನಾಡಿದ ಅವರು, ಸುರತ್ಕಲ್ ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದರು. ಆಡಳಿತ ಪಕ್ಷದ ಒತ್ತಡದಿಂದ ಪೊಲೀಸ್ ಇಲಾಖೆ ನಿಸ್ಸಹಾಯಕವಾಗಿದೆ. ಪೊಲೀಸರು ರಾಜಕೀಯ ಬಾಸ್ ಗಳ ಮಾತುಗಳಿಗೆ ಗೌರವ ಕೊಡಬಾರದು. ಕಾನೂನುಗಳಿಗೆ ಪೊಲೀಸರು ಗೌರವ ಕೊಡಬೇಕು ಎಂದರು.
ಇದನ್ನೂ ಓದಿ: ರಾಯಚೂರು: ಕೌಟುಂಬಿಕ ಕಲಹ; ಒಂದೇ ಮನೆಯ ಮೂವರ ಬರ್ಬರ ಕೊಲೆ
ರೌಡಿಗಳ ಹಾಗೆ ಯಾರ್ಯಾರ ಮಕ್ಕಳಿಗೆ ಸಂಬಂದ ಇಲ್ಲದವರು ಹೊಡೆಯುತ್ತಿದ್ದಾರೆ. ಪೊಲೀಸ್ ಇಲಾಖೆಯ ಮುಂದೆಯೇ ಹೊಡಿಯುತ್ತಾರೆ. ಪೊಲೀಸರು ಹೊಡಿಬೇಡಿ ಎಂದು ಅಂಗಲಾಚುವ ವಿಡಿಯೋ ವೈರಲ್ ಆಗುತ್ತಿದೆ. ಪೊಲೀಸ್ ಇಲಾಖೆಯ ಲಾಠಿ ಎಲ್ಲಿ ಹೋಯಿತು? ಪೊಲೀಸ್ ಇಲಾಖೆ ದಾಳಿ ಮಾಡಿದವರ ಮೇಲೆ ಯಾವ ಕೇಸ್ ಹಾಕಿದೆ? ಯಾರೋ ಒಬ್ಬ ರೌಡಿ ರೋಡಲ್ಲಿ ಹೊಡಿತಾರೆ ಅಂದ್ರೆ ಯಾರಾದ್ರೂ ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಮಂಗಳೂರಿಗೆ ಕಳುಹಿಸುತ್ತಾರಾ? ಎಂದು ಪ್ರಶ್ನಿಸಿದರು.
ಆತ್ಮವಿಶ್ವಾಸ ಧೈರ್ಯ ತುಂಬುವ ಕೆಲಸ ಪೊಲೀಸರು ಮಾಡಬೇಕಿತ್ತು. ಆದ್ರೆ ಆರೋಪಿಗಳು ಬೆಳಗ್ಗೆ ಹೋಗಿ ಸಂಜೆ ಜಾಮೀನಿನ ಮೇಲೆ ಹೊರಗೆ ಬರ್ತಾರೆ ಅಂದ್ರೆ ಈ ಪ್ರಕರಣದಲ್ಲಿ ಯಾರ ಒತ್ತಡ ಇತ್ತು? ರೌಡಿಗಳಿಗೆ, ಸಮಾಜದ್ರೋಹಿ ಶಕ್ತಿಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಯಾವುದೇ ಧರ್ಮದವರಾದ್ರೂ ತಪ್ಪು ಮಾಡಿದರೆ ಅವರಿಗೆ ತಕ್ಕ ಶಿಕ್ಷೆ ಆಗಬೇಕೆಂದರು.