ನಿಮಗೆ ರೋಸ್ ವಾಟರ್ ಅಥವಾ ಗುಲಾಬಿ ನೀರಿನ ಬಗ್ಗೆ ಎಷ್ಟು ಗೊತ್ತು? ಇದು ಬೇಸಿಗೆಯಲ್ಲಿ ನಮ್ಮ ಚರ್ಮಕ್ಕೆ ಎಷ್ಟು ಸಹಾಯ ಮಾಡುತ್ತದೆ ಎಂಬುದನ್ನು ನೀವು ತಿಳಿಯಬೇಕೆ? ರೋಸ್ ವಾಟರ್ ನಿಂದ ಏನೆಲ್ಲ ಉಪಯೋಗ ಆಗುತ್ತದೆ ಎಂಬುದನ್ನ ಇಲ್ಲಿ ತಿಳಿಯೋಣ.
ಬ್ಯಾಕ್ಟೀರಿಯಾದಿಂದ ಬರುವ ಚರ್ಮದ ಉರಿಯನ್ನು ಕಡಿಮೆ ಮಾಡುತ್ತದೆ :
ಗುಲಾಬಿ ನೀರನ್ನು ಸಾಮಾನ್ಯವಾಗಿ ರೋಸ್ ವಾಟರ್ ಎಂದೇ ಕರೆಯುತ್ತಾರೆ. ಇದು ಬೇಸಿಗೆ ಅವಧಿಯಲ್ಲಿ ಚರ್ಮವನ್ನು ಸುರಕ್ಷಿತವಾಗಿ ಇಡಲು ತುಂಬ ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ನಮಗೆ ಕಾಣಿಸಿಕೊಳ್ಳುವ ಚರ್ಮದ ಉರಿ, ಕೆಂಪು ಗಳ್ಳೆಗಳು, ಮೊಡೆವೆಗಳನ್ನು ಶಮನ ಮಾಡುವಲ್ಲಿ ಗುಲಾಬಿ ನೀರು ಉಪಯುಕ್ತವಾಗಿದೆ.
ಚರ್ಮವನ್ನು ಗುಣಪಡಿಸುತ್ತದೆ : ರೋಸ್ ವಾಟರ್ ಚರ್ಮದ ಸೌಂದರ್ಯ ಹೆಚ್ಚಿಸಲು ಮಾತ್ರ ಬಳಕೆಯಾಗುವುದಿಲ್ಲ, ಚರ್ಮದ ಮೇಲಿನ ಕಪ್ಪು ಮತ್ತು ಬಿಳಿ ಕಲೆಗಳನ್ನು ನಿವಾರಣೆ ಮಾಡಲು, ಮತ್ತು ಮೊಡವೆಗಳನ್ನು ತೊಡೆದು ಹಾಕಲು ಬಳಕೆಯಾಗುತ್ತದೆ. ಯಾಕಂದ್ರೆ ಇದ್ರಲ್ಲಿ ಹೆಚ್ಚು ಹೈಡ್ರೇಟಿಂಗ್ ಅಂಶಗಳು ಇದ್ದು, ಚರ್ಮದ ಸುಕ್ಕುಗಳನ್ನು ನಿವಾರಣೆ ಮಾಡುತ್ತದೆ.
ಆಯಾಸ ನಿವಾರಣೆ : ಒತ್ತಡ ಮತ್ತು ಆತಂಕವನ್ನು ಈ ರೋಸ್ ವಾಟರ್ ನಿವಾರಣೆ ಮಾಡುತ್ತದೆ. ಇದನ್ನು ಬಳಕೆ ಮಾಡುವುದರಿಂದ ರಿಫ್ರೆಶ್ ಆಗಿ, ಉತ್ತಮ ಆಲೋಚನೆಗೆ ತೊಡಗಬಹುದು ಎಂದು ವೈದ್ಯರು ಹೇಳುತ್ತಾರೆ.
ಮುಖವನ್ನು ತಂಪಾಗಿಡುತ್ತದೆ : ತಾಪಮಾನವು ನಿಧಾನವಾಗಿ ಏರುತ್ತಿರುವ ಈ ಬೇಸಿಗೆ ಕಾಲದಲ್ಲಿ, ತಾಜಾ ತಂಪಾದ ರೋಸ್ ವಾಟರ್ ಅನ್ನು ನಾವು ದಿನವಿಡೀ ಪಡೆಯಬೇಕಾಗುತ್ತದೆ. ಅಲ್ಲದೆ ಗುಲಾಬಿ ನೀರನ್ನು ಬಳಿಸಿದರೆ ಮನಕ್ಕೆ ಉಲ್ಲಾಸ ಸಿಗುತ್ತದೆ.
ತಲೆ ಹೊಟ್ಟು ನಿವಾರಣೆ : ಅತಿಯಾದ ಬಿಸಿಲಿನಿಂದ ನೆತ್ತಿಯು ಒಣಗುವುದು ಸಾಮಾನ್ಯವಾಗಿದೆ. ಇದರ ಪರಿಣಾವ ತಲೆಹೊಟ್ಟು ಕಾಣಿಸಿಕೊಳ್ಳುತ್ತದೆ. ಇದರ ಸಮಸ್ಯೆ ಬೇಸಿಗೆ ಅವಧಿಯಲ್ಲಿ ಇರುವುದು ಹೆಚ್ಚು. ತಲೆಹೊಟ್ಟು ಸಮಸ್ಯೆಯನ್ನು ನಿವಾರಣೆ ಮಾಡಬೇಕೆಂದರೆ ರೋಸ್ ವಾಟರ್ ಬಳಸಬೇಕು.