Advertisement

ವಾಹನಗಳಲ್ಲಿ ಈ ಕಾರಣಗಳಿಗೆ ಮಾತ್ರ ಸ್ಮಾರ್ಟ್ ಪೋನ್ ಬಳಸಿ: ಮೋಟಾರು ವಾಹನ ಕಾಯ್ದೆ ಅಧಿಸೂಚನೆ !

01:11 PM Sep 28, 2020 | Mithun PG |

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಇತ್ತೀಚೆಗೆ ಕೇಂದ್ರ ಮೋಟಾರು ವಾಹನ ನಿಯಮ-1989 ವಿವಿಧ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಗಳನ್ನು ಹೊರಡಿಸಿದ್ದು, ವಾಹನಗಳಲ್ಲಿ ಚಾಲಕರು ಮೊಬೈಲ್ ಫೋನ್ ಬಳಸುವುದರ ಕುರಿತಾಗಿ ಕೆಲವೊಂದು ಸೂಚನೆಗಳನ್ನು ನೀಡಿದೆ.

Advertisement

ವಾಹನಗಳಲ್ಲಿ ಚಾಲಕರು ಮತ್ತು ಪ್ರಯಾಣಿಕರು ಎದುರಿಸುತ್ತಿರುವ ತೊಂದರೆಗಳನ್ನು ಬಗೆಹರಿಸಲು, ಕೆಲವು ಉದ್ದೇಶಿತ ಕಾರಣಗಳಿಗೆ ಫೋನ್‌ಗಳ ಬಳಕೆಯನ್ನು ಅನುಮತಿಸಲಾಗಿದೆ.

ಪ್ರಮುಖವಾಗಿ ಡಾಕ್ಯಮೆಂಟ್ ಗಳನ್ನು ತೋರ್ಪಡಿಸಲು ಸ್ಮಾರ್ಟ್ ಫೋನ್ ಬಳಸಲು ಅನುಮತಿಸಲಾಗಿದೆ, ಇದೀಗ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳು ಡಿಜಿ-ಲಾಕರ್ ನಂತಹ ಅಪ್ಲಿಕೇಶನ್ ಗಳಲ್ಲಿ ಅಪ್ ಡೇಟ್ ಆಗಿರುವುದರಿಂದ ಚಾಲಕರು ಈ ಉದ್ದೇಶಗಳಿಗಾಗಿ ಸ್ಮಾರ್ಟ್ ಫೋನ್ ಬಳಸಬಹುದಾಗಿದೆ. ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮ ಬಹಳ ಸಹಕಾರಿಯಾಗುತ್ತದೆ.

ಮತ್ತೊಂದು ಕಾರಣ ಎಂದರೇ ನ್ಯಾವಿಗೇಷನ್ ಉದ್ದೇಶಗಳಿಗೆ ಸ್ಮಾರ್ಟ್ ಪೋನ್ ಗಳನ್ನು ಚಾಲಕರು ಬಳಕೆ ಮಾಡಬಹುದು. ಅಂದರೇ ಸ್ಮಾರ್ಟ್ ಪೋನ್ ಮ್ಯಾಪ್ ಸಹಾಯದಿಂದ ಸುಲಭವಾಗಿ  ಉದ್ದೇಶಿತ ಸ್ಥಳಗಳಿಗೆ ತಲುಪಲು ಇದು ಸಹಾಯ ಮಾಡುತ್ತದೆ. ಆದರೇ ಡಿವೈಸ್ ಗಳನ್ನು ಬಳಸುವಾಗ ಯಾವುದೇ ರೀತಿಯ ಅಡೆತಡೆಗಳು ಎದುರಾಗದಂತೆ ಮುಂಜಾಗರೂಕತೆ ವಹಿಸಬೇಕಾಗಿರುವುದು ಚಾಲಕನ ಕರ್ತವ್ಯ ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next