Advertisement

“ಡಿಜಿಟಲ್‌ ಸೇವೆಯನ್ನು ಸಾರ್ವಜನಿಕರು ಉಪಯೋಗಿಸಿ’

02:01 AM Jan 31, 2020 | Sriram |

ಉಡುಪಿ: ಜಿಲ್ಲಾ ಗ್ರಂಥಾಲಯದಲ್ಲಿ ಆಳವಡಿಸಲಾದ ಡಿಜಿಟಲ್‌ ಸೇವೆಯನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಅವರು ಗುರುವಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ವತಿಯಿಂದ ಹಮ್ಮಿಕೊಂಡ ಕಾರ್ಯ ಕ್ರಮದಲ್ಲಿ ಡಿಜಿಟಲ್‌ ಗ್ರಂಥಾಲಯಕ್ಕೆ ಚಾಲನೆ ನೀಡಿ, ಮಾತನಾಡಿದರು.

ಉಚಿತ ಓದು
ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಕುಮಾರ್‌ ಹೊಸಮನಿ ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಜಿಲ್ಲಾ, ತಾಲೂಕು, ನಗರದಲ್ಲಿ ಡಿಜಿಟಲ್‌ ಗ್ರಂಥಾಲಯದ ಸೇವೆಯನ್ನು ಪ್ರಾರಂಭಿ ಸಿದ ಕೀರ್ತಿ ಕರ್ನಾಟಕ್ಕೆ ಸಲ್ಲುತ್ತದೆ. 1 ರಿಂದ 12 ತರಗತಿ ವರೆಗಿನ ಎಲ್ಲ ಶಾಲಾ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಓದಬಹುದು ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಐ.ಜಿ, ಸಹ ಗ್ರಂಥಪಾಲಕಿ ವನಿತಾ ಉಪಸ್ಥಿತರಿದ್ದರು.

ಉತ್ತಮ ಹುದ್ದೆಗೇರಲು
ಗ್ರಂಥಾಲಯ ಕಾರಣ
ಗ್ರಂಥಾಲಯದಲ್ಲಿ ನಾನು ಮಾಡಿದ ತಪಸ್ಸಿನಿಂದಾಗಿ ನಾನು ಉತ್ತಮ ಹುದ್ದೆಗೇರಲು ಸಾಧ್ಯವಾಯಿತು. ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಗ್ರಂಥಾಲಯದ ಸಿಬಂದಿಗಳು ನಗುಮುಖದಿಂದ ಸ್ವಾಗತಿಸಿ ಅಗತ್ಯವಿರುವ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next