Advertisement
ರವಿವಾರ ನಗರದ ಶ್ರೀ ಕಾಡಸಿದ್ಧೇಶ್ವರ ದೇವಾಲಯದಲ್ಲಿ ನೇಕಾರ ಒಕ್ಕೂಟಗಳು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನೇಕಾರ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ನೇಕಾರರು ಬದುಕಲು ಕಲಿಯಬೇಕು. ಕೈಮಗ್ಗದ ಜೊತೆ ಪಾವರಲೂಮ್ ಮಗ್ಗಗಳನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಾ ಅಭಿವೃದ್ಧಿ ಹೊಂದಬೇಕು.
Related Articles
Advertisement
ನಿರಂತರ ಉದ್ಯೋಗ ನಿಶ್ಚಿತ: ಹಿಂದಿನ ಸರ್ಕಾರ ಮಾಡಿದ ತಪ್ಪು ನಿರ್ಧಾರಗಳಿಂದ ಕೆಎಚ್‌ಡಿಸಿ ನೇಕಾರರರಿಗೆ ಕಚ್ಚಾ ವಸ್ತು ಪೂರೈಕೆ ಸ್ಥಗಿತಗೊಂಡಿದೆ. ಕೇಂದ್ರಿಯ ಭಂಡಾರ ಹಾಗು ಎನ್‌ಸಿಸಿಎಫ್‌ಗಳಿಗೆ ಬಟ್ಟೆ ಪಡೆಯುವುದು ಸ್ಥಗಿತಗೊಳಿಸಿದ್ಧಾರೆ. ವಿದ್ಯಾ ವಿಕಾಸ ಯೋಜನೆಯಡಿ ಕಳಪೆ ಮಟ್ಟದ ಹಾಗು ಕಾನೂನು ಬಾಹಿರವಾಗಿ ಬಟ್ಟೆ ವಿತರಣೆ ಮಾಡಿದ್ದು ತೊಂದರೆಯಾಗಿದೆ. ಕೆಎಚ್‌ಡಿಸಿ ನೇಕಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಮತ್ತೇ ನೇಕಾರರಿಗೆ ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈಗಾಗಲೇ ಈ ಕುರಿತು ಸಚಿವರುಗಳಾದ ಸತೀಶ ಜಾರಕಿಹೊಳಿ ಹಾಗು ಮಧು ಬಂಗಾರಪ್ಪನವರೊಂದಿಗೆ ಮಹತ್ವದ ಮಾತುಕತೆ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾಗಿದೆ. ಬರುವ ಶುಕ್ರವಾರದಂದು ಜರುಗಲಿರುವ ಕ್ಯಾಬೆನೇಟ್ ಸಭೆಯಲ್ಲಿ ಎಲ್ಲದಕ್ಕೂ ಸೂಕ್ತ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಸಚಿವ ಪಾಟೀಲ ತಿಳಿಸಿದರು.
ಇಲ್ಲಿನ ನೇಕಾರ ಮುಖಂಡರು ಅನೇಕ ಬೇಡಿಕೆಗಳನ್ನು ಇಟ್ಟಿದ್ದು, ಹಂತ ಹಂತವಾಗಿ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ನೇಕಾರರ ಜೊತೆ ನಮ್ಮ ಸರಕಾರ ಯಾವಾಗಲೂ ಇರುತ್ತದೆ. ಜವಳಿ ಇಲಾಖೆಯನ್ನು ಸದೃಢ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭ ಸಿದ್ದು ಕೊಣ್ಣೂರ, ಮಾಮೂನ್ ಪಾರ್ಥನಳ್ಳಿ, ರಾಜು ಭದ್ರನ್ನವರ, ಪರಪ್ಪ ಉರಭಿನವರ, ಬಸವರಾಜ ಕೊಕಟನೂರ, ಶಿವಲಿಂಗ ಟಿರ್ಕಿ, ಕಾಡಪ್ಪ ಜಿಡ್ಡಿಮನಿ, ಆನಂದ ಜಗದಾಳ, ಶಂಕರ ಕೆಸರಗೊಪ್ಪ, ಪಂಡಿತ ಬೋಸ್ಲೆ, ವಿಜಯ ಜವಳಗಿ, ಸಂಗಪ್ಪ ಉದಗಟ್ಟಿ, ಮಹಾದೇವ ನುಚ್ಚಿ, ಹರ್ಷವರ್ಧನ ಪಟವರ್ಧನ, ಎಸ್. ಡಿ. ಮುರಗೋಡ ಸೇರಿದಂತೆ ಅನೇಕರಿದ್ದರು.