Advertisement

ಆಟೋ, ದ್ವಿಚಕ್ರ ವಾಹನಗಳಿಗೆ‌ ಕಲಬೆರಕೆ ಇಂಧನ ಬಳಕೆ

03:21 PM May 15, 2023 | Team Udayavani |

ತಿಪಟೂರು: ಕೆಲ ಪ್ರಯಾಣಿಕ ಆಟೋ, ಬೈಕ್‌ ಸೇರಿ ಲಗೇಜು ವಾಹನಗಳ ಮಾಲಿಕರು ಸೀಮೆಎಣ್ಣೆ, ಕಲಬೆರಕೆ ಮಿಶ್ರಿತ ಪೆಟ್ರೋಲ್‌, ಡೀಸೆಲ್‌ ಬಳಕೆ ಮಾಡುತ್ತಿರುವ ಕಾರಣ ನಗರ ದಲ್ಲಿ ಹೆಚ್ಚಿನ ವಾಯುಮಾಲಿನ್ಯ ಉಂಟಾಗು ತ್ತಿದೆ. ಜನರ ಆರೋಗ್ಯದ ಮೇಲೂ ವಿಪರೀತ ಪರಿಣಾಮ ಬೀರುತ್ತಿದೆ. ಇವರ ವಿರುದ್ಧ ಪೊಲೀಸರು, ಸಾರಿಗೆ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕಿದೆ.

Advertisement

ನಗರದ ಪ್ರಮುಖ ಬಿ.ಎಚ್‌.ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ದಟ್ಟ ಹೊಗೆ ಬಿಟ್ಟುಕೊಂಡು ಓಡಾಡುತ್ತಿವೆ. ಕೆಲ ವಾಹನ ಗಳವರು ಸೀಮೆಎಣ್ಣೆ ಮಿಶ್ರಿತ ಪೆಟ್ರೋಲ್‌, ಡಿಸೇಲ್‌ಗ‌ಳ ಬಳಕೆ ಮಾಡುತ್ತಿದ್ದು, ಹೊಗೆ ರಸ್ತೆ ತುಂಬ ದಟ್ಟವಾಗಿ ಹರಡಿಕೊಳ್ಳುತ್ತಿದೆ. ಈ ವಾಹನಗಳ ಹಿಂದೆ ಬರುವ ವಾಹನ ಚಾಲಕ ರಿಗೆ ಮುಂದಿನ ವಾಹನಗಳು ಕಾಣಿಸದಂತಾಗಿ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ಕೆಟ್ಟ ಹೊಗೆಯಿಂದ ಕಣ್ಣು, ಹೃದಯ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಆಟೋಗಳೇ ಹೆಚ್ಚು: ಇದೂ ಸಾಲದೆಂದು ಸೀಮೆಎಣ್ಣೆ ಮಿಶ್ರಿತ ವಾದರೆ ವಾಹನಗಳ ಶಬ್ದ ಹೆಚ್ಚಾಗುವುದರಿಂದ ಜನರಿಗೆ ಓಡಾಡಲು ಕಿರಿಕಿರಿಯಾಗುತ್ತಿದೆ. ಶಬ್ದಮಾಲಿನ್ಯವೂ ಉಂಟಾಗುತ್ತಿದೆ. ಹೆಚ್ಚಾಗಿ ಆಟೋ ರಿಕ್ಷಾದವರೇ ಸೀಮೆಎಣ್ಣೆ ಮಿಶ್ರಣ ಮಾಡಿಕೊಂಡು ವಾಹನಗಳನ್ನು ಓಡಿಸುತ್ತಿ ರುವುದು ಕಂಡುಬರುತ್ತಿದೆ.

ಕರ್ಕಶ ಹಾರನ್‌ಗಳ ಬಳಕೆ: ಕೆಲ ದ್ವಿಚಕ್ರ ವಾಹನಗಳವರು ಉದ್ದೇಶಪೂರಕವಾಗಿಯೇ ತಮ್ಮ ವಾಹನಗಳ ಹಾರನ್‌ಗಳನ್ನು ಕರ್ಕಶ ವಾಗಿ ಕೂಗುವಂತೆ ಮಾಡಿಸಿಕೊಂಡಿದ್ದು, ಇದರಿಂದ ಜನರಿಗೆ ಕಿರಿಕಿರಿಯುಂಟಾಗುತ್ತಿದೆ. ಶಬ್ದಮಾಲಿನ್ಯಕ್ಕೂ ದಾರಿ ಮಾಡಿಕೊಟ್ಟಂತಾ ಗುತ್ತಿದೆ. ಹೆಚ್ಚಾಗಿ ಕೆಲ ಪುಂಡ ಹುಡುಗರೇ ಸ್ಟಂಟ್‌ಗಾಗಿ ಈ ರೀತಿ ಹಾರನ್‌ಗಳನ್ನು ಹಾಕಿಸಿ ಕೊಂಡು ಹುಡುಗಿಯರು, ಮಹಿಳೆಯರ ಪಕ್ಕಕ್ಕೇ ಬಂದು ಹಾರನ್‌ ಮಾಡಿ ಬೆಚ್ಚಿಬೀಳಿಸು ವಂತೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಆ್ಯಂಬುಲೆನ್ಸ್‌ ರೀತಿಯ ಹಾರನ್‌ ಬಳಸಿ ಕೊಂಡು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next