Advertisement

Permission ಇಲ್ಲದೆ ಮಾಹಿತಿ ಬಳಕೆ: ನೆಟ್‌ಫ್ಲಿಕ್ಸ್‌ಗೆ ನೋಟಿಸ್‌

12:25 AM Sep 10, 2024 | Team Udayavani |

ಹೊಸದಿಲ್ಲಿ: ವಿವಾದಕ್ಕೀಡಾದ ನೆಟ್‌ಫ್ಲಿಕ್ಸ್‌ ವೆಬ್‌ ಸರಣಿ “ಐಸಿ 814 ಕಂದಹಾರ್‌ ಹೈಜಾಕ್‌’ನಲ್ಲಿ ಎಎನ್‌ಐ ಸುದ್ದಿಸಂಸ್ಥೆಯ ಸುದ್ದಿಗಳನ್ನು ಅನುಮತಿಯಿಲ್ಲದೇ ಬಳಸಿಕೊಳ್ಳಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ.

Advertisement

ಜತೆಗೆ ನೆಟ್‌ಫ್ಲಿಕ್ಸ್‌, ನಿರ್ಮಾ ಪಕರಿಗೆ ನೋಟಿಸ್‌ ನೀಡಿದೆ. 1999ರಲ್ಲಿ ಕಂದಹಾರ ದಲ್ಲಿ ನಡೆದ ವಿಮಾನದ ಅಪಹರಣದ ಕಥಾವಸ್ತು ಹೊಂದಿರುವ ಈ ವೆಬ್‌ಸರಣಿಯಲ್ಲಿ ಈ ಅಪಹರಣದ ಬಗ್ಗೆ ತಾನು ಪ್ರಕಟಿಸಿದ್ದ ಸುದ್ದಿ­ಯನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ 4 ಎಪಿಸೋಡ್‌ಗಳನ್ನು ತೆಗೆಯಬೇಕು ಎಂದು ಎಎನ್‌ಐ ನೋಟಿಸ್‌ನಲ್ಲಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next