ಅರಸೀಕೆರೆ: ನಗರದ ಹೊರ ವಲಯ ದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಬಾರಿ ಉತ್ತಮ ಫಲಿ ತಾಂಶ ಬಂದಿದ್ದು. ಈ ಕಾಲೇಜಿನಲ್ಲಿರುವ ಉತ್ತಮ ಬೋಧಕವರ್ಗವನ್ನು ಬಳಸಿ ಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ವನ್ನು ಉತ್ತಮವಾಗಿ ರೂಪಿಸಿಕೊಳ್ಳ ಬೇಕೆಂದು ಕಾಲೇಜಿನ ಪ್ರಾಂಶುಪಾಲ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಅನುಭವಿ ಉಪನ್ಯಾಸಕ ಬಳಗ ವಿದೆ. ಗುಣಮಟ್ಟದಲ್ಲಿ ಬೋಧನೆ ಯೊಂದಿಗೆ ಖಾಸಗಿ ವಿದ್ಯಾಸಂಸ್ಥೆಗಳಿ ಗಿಂತಲೂ ಉತ್ತಮ ಫಲಿತಾಂಶ ಬರುತ್ತದೆ. ಇದಕ್ಕೆ ನಮ್ಮಲ್ಲಿನ ಉಪನ್ಯಾಸ ಕರು ಹಾಗೂ ವಿದ್ಯಾರ್ಥಿಗಳ ಹೆಚ್ಚಿನ ಆಸಕ್ತಿ ಹಾಗೂ ಪೋಷಕ ವರ್ಗದ ಸಹಕಾರ ಪ್ರಮುಖ ಕಾರಣವಾಗಿದೆ ಎಂದರು.
ವಿದ್ಯಾರ್ಜನೆಗೆ ಉತ್ತಮ ವಾತಾವರಣ ಆಧುನಿಕ ಕಟ್ಟಡ ಕಟ್ಟಡವಿದ್ದು, ಆಸನಗಳು ಅತ್ಯುತ್ತಮ ಗ್ರಂಥಾಲಯ, ಕ್ರೀಡೆ ,ಎನ್‌ಎಸ್‌ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಹಾಗೂ ಪ್ರೋತ್ಸಾಹ ಬೋಧನಾ ಸಲಕರಣೆ ಮತ್ತು ಪ್ರಯೋಗಾಲಯ ಹೊಂದಿರುವ ಈ ಕಾಲೇಜಿಗೆ ಈಗಾಗಲೇ ಬಿಎ (ಎಚ್ಇಪಿ), (ಎಚ್ಇಕೆ), (ಎಚ್ಇಎಸ್), (ಬಿಎಸ್ಸಿ), (ಪಿಸಿಎಂ), (ಪಿಸಿಎಂಸಿ), (ಪಿಎಂಇ), (ಬಿಕಾಂ) ಹಾಗೂ (ಬಿಬಿಎಂ)ನಲ್ಲಿ ಕಳೆದ ಹತ್ತು ವರ್ಷ ಗಳಿಂದ ಅತ್ಯುತ್ತಮ ಫಲಿತಾಂಶ ಬಂದಿದ್ದು 2019-20ನೇ ಸಾಲಿಗೆ ವಿದ್ಯಾ ರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖ ಲಾಗುವ ಮೂಲಕ ಸರ್ಕಾರದ ಸೌಲಭ್ಯ ಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಜ್ಞಾನ ವೃದ್ಧಿಗೊಳಿಸಿಕೊಳ್ಳಬೇಕೆಂದರು.
ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ. ಉದ್ಯೋಗ ಕೋಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡಲಾಗುವುದೆಂದರು.