Advertisement

ಡಯಾಮಂಡ್‌ ಲೀಗ್‌ ಅಥ್ಲೆಟಿಕ್ಸ್‌: ಉಸೇನ್‌ ಬೋಲ್ಟ್ಗೆ ಚಿನ್ನ

06:30 AM Jul 23, 2017 | Team Udayavani |

ಜಮೈಕಾ: ವಿಶ್ವದ ಖ್ಯಾತ ಓಟಗಾರ, ಒಲಿಂಪಿಯನ್‌ ಜಮೈಕಾದ ಉಸೇನ್‌ ಬೋಲ್ಟ್ ಡಯಾಮಂಡ್‌ ಲೀಗ್‌ ಅಥ್ಲೆಟಿಕ್ಸ್‌ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 

Advertisement

ಮೊನಾಕೊದಲ್ಲಿ ನಡೆದ ಕೂಟದಲ್ಲಿ ಬೋಲ್ಟ್ 9.95 ಸೆಕೆಂಡ್ಸ್‌ಗಳಲಿ ಗುರಿ ಮುಟ್ಟಿದರು. ಉಸೇನ್‌ ಬೋಲ್ಟ್  ಒಲಿಂಪಿಕ್ಸ್‌ನಲ್ಲಿ 8 ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 11 ಪದಕ ಗೆದ್ದಿದ್ದಾರೆ. ಬೋಲ್ಟ್ ಈಗಾಗಲೇ ತವರಿನ ಎಲ್ಲ ಕ್ರೀಡಾಕೂಟಗಳಿಗೆ ವಿದಾಯ ಹೇಳಿ ಆಗಿದೆ. ಲಂಡನ್‌ನಲ್ಲಿ ಮುಂದಿನ ತಿಂಗಳು ವಿಶ್ವ ಚಾಂಪಿಯನ್‌ಶಿಪ್‌ ಅಥ್ಲೆಟಿಕ್ಸ್‌ ನಡೆಯಲಿದೆ. ಬಳಿಕ ವಿಶ್ವ ಟ್ರ್ಯಾಕ್‌ ಸ್ಪರ್ಧೆಗಳಿಗೆ ಉಸೇನ್‌ ಬೋಲ್ಟ್ ವಿದಾಯ ಹೇಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next