Advertisement

ಅಲ್‌ಖೈದಾ ಅಟ್ಟಹಾಸಕ್ಕೆ 21 ವರ್ಷ: 9/11 ದಾಳಿ ನೆನೆದ ಅಮೆರಿಕನ್ನರು

09:38 PM Sep 11, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್‌ ಸೆಂಟರ್‌ ಹಾಗೂ ಪೆನ್ಸಿಲ್ವೇನಿಯಾದ ಪೆಂಟಗಾನ್‌ ಮೇಲೆ ಅಲ್‌ಖೈದಾ ಉಗ್ರರಿಂದ ದಾಳಿ ನಡೆದು ಭಾನುವಾರಕ್ಕೆ ಸರಿಯಾಗಿ 21 ವರ್ಷ. ಈ ಹಿನ್ನೆಲೆಯಲ್ಲಿ ಭಾನುವಾರ ಈ ಎರಡೂ ಸ್ಥಳಗಳಲ್ಲಿ ಸೇರಿದ ಅಮೆರಿಕನ್ನರು, ಮೃತರಿಗೆ ಗೌರವ ಸಮರ್ಪಿಸಿದ್ದಾರೆ.

Advertisement

ಹಲವೆಡೆ ಸಾಮಾಜಿಕ ಸೇವೆಗಳನ್ನೂ ಮಾಡಿ ಈ ದಿನವನ್ನು ವಿಶೇಷವಾಗಿಸಲಾಗಿದೆ. 2,977 ಮಂದಿಯ ಜೀವವನ್ನು ಬಲಿ ತೆಗೆದುಕೊಂಡ ದಾಳಿಯ ಕರಾಳ ನೆನಪನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೂ ಸ್ಮರಿಸಿದ್ದಾರೆ.

ದಾಳಿಯ ಮುಖ್ಯ ಆರೋಪಿ ಖಲೀದ್‌ ಶೇಕ್‌ ಮೊಹಮದ್‌ ಅನ್ನು 2003ರಲ್ಲಿಯೇ ಪಾಕಿಸ್ತಾನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು 21 ವರ್ಷಗಳು ಕಳೆದಿದ್ದರೂ ಆತನಿಗೆ ಇನ್ನೂ ಶಿಕ್ಷೆ ಘೋಷಣೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next