Advertisement

US: ಸಿಯಾಟಲ್‌ನಲ್ಲಿ ಭಾರತೀಯ ಯುವತಿ ಸಾವು: ನಕ್ಕ ಅಧಿಕಾರಿ ವಿರುದ್ಧ ತನಿಖೆ

01:21 AM Sep 14, 2023 | Team Udayavani |

ಸಿಯಾಟಲ್‌: ಅಮೆರಿಕದ ಸಿಯಾಟಲ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಪೊಲೀಸ್‌ ಗಸ್ತು ವಾಹನವು ಢಿಕ್ಕಿಯಾದ ಪರಿಣಾಮ ಭಾರತೀಯ ಯುವತಿ ಈ ವರ್ಷದ ಜನವರಿಯಲ್ಲಿ ಅಸುನೀಗಿದ್ದರು. ಈ ಘಟನೆ ಕುರಿತು ಪೊಲೀಸ್‌ ಅಧಿಕಾರಿ ಗಹಗಹಿಸಿ ನಕ್ಕಿರುವುದು ಬಾಡಿ ಕೆಮರಾದಿಂದ ತಿಳಿದುಬಂದಿದೆ. ಪೊಲೀಸ್‌ ಅಧಿಕಾರಿಯ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಯಾಟಲ್‌ ಪೊಲೀಸ್‌ ಇಲಾಖೆ ತನಿಖೆಗೆ ಆದೇಶಿಸಿದೆ. ಜ.23ರಂದು ನಡೆದ ಅಪಘಾತದಲ್ಲಿ ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ಜಾಹ್ನವಿ ಕಂಡೂಲ(23) ಮೃತಪಟ್ಟಿದ್ದರು.

Advertisement

ವಾಹನವನ್ನು ಪೊಲೀಸ್‌ ಅಧಿಕಾರಿ ಕೆವಿನ್‌ ಡೇವ್‌ ಚಲಾಯಿಸುತ್ತಿದ್ದರು. ಘಟನೆ ನಡೆದ ಕೆಲವು ಗಂಟೆಗಳಲ್ಲಿ ತನ್ನ ಸಹೋದ್ಯೋಗಿಯೊಂದಿಗೆ ಮಾತನಾಡಿದ ಪೊಲೀಸ್‌ ಅಧಿಕಾರಿ ಡೇನಿಯಲ್‌ ಆಡೆರೆರ್‌ “ಅವಳು ಸತ್ತಳು. 11 ಸಾವಿರ ಡಾಲರ್‌ ಚೆಕ್‌ ಬರೆದು ಬಿಸಾಕೋಣ. ಓ ಅವಳಿಗೆ 26 ವಯಸ್ಸು. ಹಾಗಾದರೆ ಹೆಚ್ಚಿನ ಬೆಲೆ ಇಲ್ಲ’ ಎಂದು ಗಹಗಹಿಸಿ ನಕ್ಕಿದ್ದಾರೆ. ಇದು ಅವರು ಧರಿಸಿದ್ದ ಬಾಡಿ ಕೆಮರಾದಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next