Advertisement

US, UK ಯಿಂದ ಪ್ರಜೆಗಳಿಗೆ ಒತ್ತಾಯ: ಯಾವುದಾದರೂ ಟಿಕೆಟ್ ಬಳಸಿ ಲೆಬನಾನ್ ತೊರೆಯಿರಿ

09:13 PM Aug 03, 2024 | Team Udayavani |

ಬೈರತ್‌: ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಸಂಘರ್ಷ ತೀವ್ರವಾಗುತ್ತಿರುವ ನಡುವೆ “ಲಭ್ಯವಿರುವ ಯಾವುದೇ ಟಿಕೆಟ್” ನಲ್ಲಿ ಲೆಬನಾನ್ ಅನ್ನು ತೊರೆಯುವಂತೆ ತಮ್ಮ ಅಮೆರಿಕ ಮತ್ತು ಇಂಗ್ಲೆಂಡ್ ಸರ್ಕಾರಗಳು ತಮ್ಮ ನಾಗರಿಕರಿಗೆ ಸಲಹೆ ನೀಡಿವೆ.

Advertisement

ಕೆಲವು ವಿಮಾನಯಾನ ಸಂಸ್ಥೆಗಳು ದೇಶದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರೂ ಸಹ, ವಿಮಾನಗಳು ಇನ್ನೂ ಲಭ್ಯವಿವೆ ಮತ್ತು ನಾಗರಿಕರು ಲಭ್ಯವಿರುವ ಯಾವುದೇ ವಿಮಾನವನ್ನು ಕಾಯ್ದಿರಿಸಬೇಕು ಎಂದು ಲೆಬನಾನ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಲೆಬನಾನ್‌ನಿಂದ ನಿರ್ಗಮಿಸಲು ಬಯಸುವವರು ಅವರಿಗೆ ಲಭ್ಯವಿರುವ ಯಾವುದೇ ಟಿಕೆಟ್ ಅನ್ನು ಬುಕ್ ಮಾಡಲು ನಾವು ಸೂಚಿಸುತ್ತೇವೆ. ವಿಮಾನವು ತತ್ ಕ್ಷಣವೇ ಹೊರಡದಿದ್ದರೂ ಅಥವಾ ಅವರ ಮೊದಲ ಆಯ್ಕೆಯ ಮಾರ್ಗವನ್ನು ಅನುಸರಿಸದಿದ್ದರೂ ಸಹ ಟಿಕೆಟ್ ಮಾಡಿ ಪ್ರಯಾಣ ಮುಂದುವರಿಸಿ ಎಂದು ಬೈರತ್‌ನಲ್ಲಿರುವ US ರಾಯಭಾರ ಕಚೇರಿ ಹೇಳಿದೆ.ಯುಕೆ ಸರಕಾರವೂ ಲೆಬನಾನ್‌ನಲ್ಲಿರುವ ಎಲ್ಲಾ ಬ್ರಿಟಿಷ್ ಪ್ರಜೆಗಳಿಗೆ ತತ್ ಕ್ಷಣವೇ ಮರಳುವಂತೆ ಸೂಚನೆ ನೀಡಿದೆ. ಹಲವಾರು ಇತರ ದೇಶಗಳು ಕೂಡ ತಮ್ಮ ನಾಗರಿಕರಿಗೆ ಲೆಬನಾನ್ ಅನ್ನು ಬೇಗನೆ ತೊರೆಯುವಂತೆ ಸಲಹೆಯನ್ನು ನೀಡಿವೆ.

ಕಳೆದ ವರ್ಷ ಅಕ್ಟೋಬರ್ 7 ರಿಂದ ಗಾಜಾದಲ್ಲಿ ಇಸ್ರೇಲ್-ಹಮಾಸ್ ಯುದ್ಧ ನಡೆಯುತ್ತಿದ್ದು. ಇರಾನ್ ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಮತ್ತು ಲೆಬನಾನ್ ಮೂಲದ ಹೆಜ್ಬುಲ್ಲಾದ ಹಿರಿಯ ನಾಯಕನ ಹತ್ಯೆಯ ನಂತರ ಮತ್ತಷ್ಟು ಉದ್ವಿಗ್ನವಾಗಿದೆ. 10 ತಿಂಗಳ ಹಳೆಯ ಯುದ್ಧವು ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಂಘರ್ಷವಾಗಿ ಬದಲಾಗಬಹುದು ಎಂಬ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next