Advertisement

US; ಭಾರತೀಯಳನ್ನು ಕೊಂದು ನಕ್ಕಿದ್ದ ಪೊಲೀಸ್‌ ವಜಾ

01:24 AM Jul 19, 2024 | Team Udayavani |

ಸಿಯಾಟೆಲ್‌: ಭಾರತೀಯ ವಿದ್ಯಾರ್ಥಿನಿಯ ಸಾವಿಗೆ ಕಾರಣ ವಾಗಿ, ಅದನ್ನು ಹೀಯಾಳಿಸಿ ನಕ್ಕಿದ್ದ ಅಮೆರಿಕ ಪೊಲೀಸ್‌ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ಭಾರತ ಮೂಲದ ಜಾಹ್ನವಿ ಕಂಡೂಲ ಕಳೆದ ವರ್ಷ ಜ.23ರಂದು ರಸ್ತೆ ದಾಟುವಾಗ ಗಂಟೆಗೆ 119 ಕಿ.ಮೀ. ವೇಗದಲ್ಲಿ ಬಂದ ಪೊಲೀಸ್‌ ಅಧಿಕಾರಿ ಕೆವಿನ್‌ ಡೇವ್‌ ಕಾರು ಗುದ್ದಿದ ಪರಿಣಾಮ ಸಾವಿಗೀಡಾಗಿದ್ದರು. ಬಳಿಕ ಕೆವಿನ್‌ 4 ಸೆಕೆಂಡ್‌ ನಕ್ಕಿದ್ದರು. ಈ ಬಗ್ಗೆ ಪೊಲೀಸ್‌ ಇಲಾಖೆ ವರದಿ ಮಾಡಿದ್ದು, ಕೆವಿನ್‌ರನ್ನು ಕೆಲಸದಿಂದ ವಜಾ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next