ವಾಷಿಂಗ್ಟನ್: ಅಮೆರಿಕದಲ್ಲಿ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ನಡೆಸುವ ಬಹುರಾಷ್ಟ್ರೀಯ ಸ್ಪರ್ಧೆ “ನ್ಯಾಶನಲ್ ಸ್ಪೆಲ್ಲಿಂಗ್ ಬೀ’ ನಲ್ಲಿ ಭಾರತೀಯ ಮೂಲದ 11 ವರ್ಷದ ಬಾಲಕ ದೇವ್ ಶಾ ವಿಜೇತನಾಗಿದ್ದು, 50 ಸಾವಿರ ಡಾಲರ್ ನಗದು ಬಹುಮಾನ ಪಡೆದುಕೊಂಡಿದ್ದಾನೆ. ಸುಳಿವುಗಳನ್ನು ಬಳಸಿ ಸರಿಯಾದ ಪದವನ್ನು ಹುಡುಕಿ, ಅದರ ಅಕ್ಷರಗಳನ್ನು ತಪ್ಪಿಲ್ಲದಂತೆ ಜೋಡಿಸಿ ಉಚ್ಚರಿಸುವ ಈ ಆಟಕ್ಕೆ ವಿಶ್ವದಾದ್ಯಂತ 11 ಲಕ್ಷಕ್ಕೂ ಅಧಿಕ ಮಕ್ಕಳು ಸ್ಪರ್ಧಿಗಳಾಗಿದ್ದರು.
Advertisement