Advertisement

ಅಮೆರಿಕಾ: ಪ್ಲೊರಿಡಾದ ಚರ್ಚ್’ನಲ್ಲಿ ಅಪರಿಚಿತನಿಂದ ಗುಂಡಿನ ದಾಳಿ; ಇಬ್ಬರು ಸಾವು

09:57 AM Feb 03, 2020 | Mithun PG |

ಅಮೆರಿಕಾ: ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅಪರಿಚಿತನೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪ್ಲೊರಿಡಾದ ವಿಕ್ಟರಿ ಸಿಟಿ ಚರ್ಚ್ ನಲ್ಲಿ ನಡೆದಿದೆ.

Advertisement

ಭಾರತೀಯ ಕಾಲಮಾನ ಮಧ್ಯಾರಾತ್ರಿ 1 ಗಂಟೆಯ ವೇಳೆ ( ಅಮೇರಿಕಾ 2:30 PM) ಅಪರಿಚಿತನಿಂದ ಈ ಗುಂಡಿನ ದಾಳಿ ನಡೆದಿದ್ದು 15 ವರ್ಷದ ಬಾಲಕ  ಸೇರಿದಂತೆ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಮಹಿಳೆ ಮತ್ತು ಮತ್ತೋರ್ವ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದಲ್ಲಿ ಮೃತಪಟ್ಟವರ ಮತ್ತು ಗಾಯಗೊಂಡವರ ಹೆಸರುಗಳು ತಿಳಿಸದುಬಂದಿಲ್ಲ ಎಂದು ರೈವಿರಿಯಾ ಬೀಚ್ ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ 13 ಸುತ್ತು ಗುಂಡು ಹಾರಿಸಿದ್ದು,  ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಂತ್ಯಕ್ರಿಯೆಯ ಬಳಿಕ ಚರ್ಚ್ ನಲ್ಲಿ ಪ್ರಾರ್ಥನೆ ನಡೆಸಲಾಗುತ್ತಿತ್ತು. ಈ ವೇಳೆ ಅಪರಿಚಿತ ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಇದಕ್ಕಾಗಿ ಶೋಕ ವ್ಯಕ್ತಪಡಿಸುತ್ತಿದ್ದೇವೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಚರ್ಚ್ ನ ಸದಸ್ಯನಲ್ಲ ಎಂದು ಪಾದ್ರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next