Advertisement

ಭಾರತಕ್ಕೆ 307 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಹಸ್ತಾಂತರಿಸಿದ ಅಮೆರಿಕ

11:12 AM Oct 20, 2022 | Team Udayavani |

ನ್ಯೂಯಾರ್ಕ್‌: ಭಾರತದಿಂದ ಕಳುವಾಗಿದ್ದ 307 ಪ್ರಾಚೀನ ವಸ್ತುಗಳನ್ನು ಅಮೆರಿಕ ಮತ್ತೆ ಭಾರತಕ್ಕೆ ಮರಳಿಸಿದೆ. 33 ಕೋಟಿ ರೂ.ಗೂ ಅಧಿಕ ಮೊತ್ತದ ಈ ವಸ್ತುಗಳ ಪೈಕಿ 235 ವಸ್ತುಗಳನ್ನು ಕಪೂರ್‌ ಎಂಬ ಕಳ್ಳಸಾಗಣೆದಾರನಿಂದಲೇ ವಶಪಡಿಸಿಕೊಳ್ಳಲಾಗಿದೆ.

Advertisement

ಮ್ಯಾನ್‌ಹಟನ್‌ ಜಿಲ್ಲಾ ಕೇಂದ್ರ ತನಿಖಾ ತಂಡದ ಮಾಡಿದ ದಾಳಿಯ ವೇಳೆ ಈ ವಸ್ತುಗಳು ಪತ್ತೆಯಾಗಿದ್ದವು. ಇವೂ ಸೇರಿದಂತೆ ಒಟ್ಟು 307 ಅಮೂಲ್ಯ ಪ್ರಾಚೀನ ವಸ್ತುಗಳನ್ನು ನ್ಯೂಯಾರ್ಕ್‌ನ ಭಾರತೀಯ ದೂತಾವಾಸದಲ್ಲಿ ನಡೆದ ಸಭೆಯಲ್ಲಿ ದೇಶಕ್ಕೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ದೂತಾವಾಸಾಧಿಕಾರಿ ರಣದೀರ್‌ ಜೈಸ್ವಾಲ್‌, ಅಮೆರಿಕದ ವಿಶೇಷ ತನಿಖಾಧಿಕಾರಿ ಕ್ರಿಸ್ಟೋಫ‌ರ್‌ ಲಾವ್‌ ಹಾಜರಿದ್ದರು.

ಕಪೂರ್‌ ಹಿನ್ನೆಲೆಯೇನು?: ಕಪೂರ್‌ ಹಿಂದಿನಿಂದಲೂ ಕಳ್ಳಸಾಗಣೆಯಿಂದ ಗುರುತಿಸಿಕೊಂಡಿದ್ದ ವ್ಯಕ್ತಿ. ಈತ ಅಫ್ಘಾಸ್ತಾನ, ಕಾಂಬೋಡಿಯ, ಭಾರತ, ಇಂಡೋನೇಷ್ಯಾ, ಮಾಯೆನ್ಮಾರ್‌, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲೆಂಡ್‌ ಇನ್ನಿತರೆ ದೇಶಗಳಿಂದ ಈ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಮುಖ್ಯಪಾತ್ರ ವಹಿಸಿದ್ದ. ಇಂತಹ ಸಾಂಸ್ಕೃತಿಕ ಮಹತ್ವ ಹೊಂದಿದ್ದ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದ ವ್ಯಕ್ತಿಗಳಿಂದಲೇ ಇವನ್ನು ಅಪಹರಿಸಲಾಗಿದೆ. ಇವೆಲ್ಲದರ ಪೈಕಿ ಅತ್ಯಂತ ಮಹತ್ವದ್ದೆಂದರೆ ಅಮೃತಶಿಲೆಯಿಂದ ಮಾಡಿದ ಅರ್ಧಚಂದ್ರಾಕೃತಿ ಕಮಾನು. ಇದರ ಬೆಲೆ 70 ಲಕ್ಷ ರೂ.ಗೂ ಅಧಿಕ.

Advertisement

Udayavani is now on Telegram. Click here to join our channel and stay updated with the latest news.

Next