ವಾಷಿಂಗ್ಟನ್ ಡಿಸಿ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತ ಸೇರಿದಂತೆ ಬ್ರಿಕ್ಸ್ (BRICS) ರಾಷ್ಟ್ರಗಳಿಗೆ 100 ಪ್ರತಿಶತ ಸುಂಕವನ್ನು ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಯುಎಸ್ ನಿಷ್ಕ್ರಿಯವಾಗಿರುವಾಗ ಬ್ರಿಕ್ಸ್ ರಾಷ್ಟ್ರಗಳು ಡಾಲರ್‌ನಿಂದ ದೂರ ಸರಿಯಲು ಪ್ರಯತ್ನಿಸುವ ಕಲ್ಪನೆಯು “ಮುಗಿದಿದೆ” ಎಂದು ಟ್ರಂಪ್ ಶನಿವಾರ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಟ್ರೂತ್ ಸೋಶಿಯಲ್‌ನಲ್ಲಿ ಮಾತನಾಡಿದ ಅವರು, ಹೊಸ ಕರೆನ್ಸಿಯನ್ನು ರಚಿಸುವುದನ್ನು ತಪ್ಪಿಸಲು ಅಥವಾ ಯುಎಸ್ ಡಾಲರ್ ಅನ್ನು ಬದಲಿಸಲು ಯಾವುದೇ ಕರೆನ್ಸಿಯನ್ನು ಬೆಂಬಲಿಸುವುದನ್ನು ತಪ್ಪಿಸಲು ಈ ದೇಶಗಳಿಂದ ಸ್ಪಷ್ಟ ಬದ್ಧತೆಯನ್ನು ಅವರು ಒತ್ತಾಯಿಸಿದರು.
ಅಕ್ಟೋಬರ್‌ನಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಡಾಲರ್ ಹೊರತಾದ ವಹಿವಾಟುಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿತ್ತು. BRICS ಗುಂಪು ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳನ್ನು ಒಳಗೊಂಡಿದೆ.
ಅವರು ಹೊಸ ಬ್ರಿಕ್ಸ್ ಕರೆನ್ಸಿಯನ್ನು ರಚಿಸುವುದಿಲ್ಲ ಅಥವಾ ಪ್ರಬಲವಾದ ಯುಎಸ್ ಡಾಲರ್ ಬದಲಿಗೆ ಯಾವುದೇ ಇತರ ಕರೆನ್ಸಿಗೆ ಬೆಂಬಲಿಸುವುದಿಲ್ಲ ಎನ್ನುವ ಬಗ್ಗೆ ಈ ದೇಶಗಳಿಂದ ನಮಗೆ ಬದ್ಧತೆಯ ಅಗತ್ಯವಿದೆ. ಇಲ್ಲದಿದ್ದರೆ ಅವರು 100% ಟ್ಯಾಕ್ಸ್ ಎದುರಿಸುತ್ತಾರೆ ಎಂದು ಟ್ರಂಪ್ ಹೇಳಿದರು.
“ಬ್ರಿಕ್ಸ್ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಯುಎಸ್ ಡಾಲರ್ ಅನ್ನು ಬದಲಿಸುವ ಯಾವುದೇ ಅವಕಾಶವಿಲ್ಲ. ಅದನ್ನು ಪ್ರಯತ್ನಿಸುವ ಯಾವುದೇ ದೇಶವು ಅಮೆರಿಕಕ್ಕೆ ವಿದಾಯ ಹೇಳಬೇಕು” ಎಂದು ಅವರು ಹೇಳಿದರು.