Advertisement

ಅಮೆರಿಕಾದ ಮಹತ್ವದ ಗನ್ ನಿಯಂತ್ರಣ ಕಾನೂನಿಗೆ ಸಹಿ ಹಾಕಿದ ಬಿಡೆನ್

07:16 PM Jun 25, 2022 | Team Udayavani |

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಶನಿವಾರ ದಶಕಗಳಲ್ಲಿ ಬಂದೂಕು ಸುರಕ್ಷತೆಯ ಮೊದಲ ಮಹತ್ವದ ಫೆಡರಲ್ ಮಸೂದೆ ಕಾನೂನಿಗೆ ಸಹಿ ಹಾಕಿದ್ದಾರೆ. ಕಾನೂನು ನಿಜವಾಗಿಯೂ ಅಗತ್ಯ,ಇದು “ಜೀವಗಳನ್ನು ಉಳಿಸುತ್ತದೆ” ಎಂದು ಹೇಳಿದ್ದಾರೆ.

Advertisement

“ಈ ಮಸೂದೆಯು ನನಗೆ ಬೇಕಾದ ಎಲ್ಲವನ್ನೂ ಮಾಡದಿದ್ದರೂ, ಇದು ಜೀವಗಳನ್ನು ಉಳಿಸಲು ನಾನು ದೀರ್ಘಕಾಲಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ಒಳಗೊಂಡಿದೆ” ಎಂದು ಅವರು ಯುರೋಪಿನ ಪ್ರಮುಖ ರಾಜತಾಂತ್ರಿಕ ಶೃಂಗಸಭೆಗಳಿಗೆ ಹೊರಡುವ ಮೊದಲು ಶ್ವೇತಭವನದಲ್ಲಿ ಹೇಳಿದ್ದಾರೆ.

ಗುಂಡಿನ ದಾಳಿಯ ಬಲಿಪಶುಗಳ ಕುಟುಂಬಗಳನ್ನು ಉಲ್ಲೇಖಿಸಿ, “ನಮಗಾಗಿ ಏನಾದರೂ ಮಾಡಬೇಕೆಂಬುದು ಅವರ ಸಂದೇಶವಾಗಿತ್ತು. ಇಂದು ಸರಿ, ನಾವು ಮಾಡಿದ್ದೇವೆ.” ಎಂದು ಅಧ್ಯಕ್ಷ ಬಿಡೆನ್ ಹೇಳಿಕೆ ನೀಡಿದ್ದು, ಗುರುವಾರ ಸೆನೆಟ್ ಅಂಗೀಕಾರದ ನಂತರ ಶುಕ್ರವಾರ ಅಂತಿಮ ಅನುಮೋದನೆಯನ್ನು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next