ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಮ್ಮ ಡೆಲಾವೆರ್‌ನಲ್ಲಿನ ರಜಾಕಾಲದ ನಿವಾಸದಲ್ಲಿ ತಂಗಿದ್ದಾಗಲೇ, ಅದರ ಸಮೀಪದಲ್ಲೇ ಅಂದರೆ ನಿಷೇಧಿತ ವಲಯದಲ್ಲಿ ಖಾಸಗಿ ವಿಮಾನವೊಂದು ಹಾರಾಟ ನಡೆಸಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ನಂತರ ಪರಿಶೀಲಿಸಿದಾಗ, ಅದು ದಾಳಿ ನಡೆಸುವ ಉದ್ದೇಶದಿಂದ ಹಾರಾಡಿದ ವಿಮಾನ ಅಲ್ಲ. ತಪ್ಪಾಗಿ ಅದು ಅಧ್ಯಕ್ಷರ ಮನೆ ಪಕ್ಕ ಹಾರಾಟ ನಡೆಸಿದೆ. ಅದನ್ನು ಕೂಡಲೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.
ಪರಿಸ್ಥಿತಿ ತಿಳಿಗೊಂಡ ಬಳಿಕವಷ್ಟೇ ಬೈಡೆನ್ ದಂಪತಿಯನ್ನು ಮತ್ತೆ ರಜಾಕಾಲದ ನಿವಾಸಕ್ಕೆ ಕರೆತರಲಾಯಿತು.