ಹಿರೋಶಿಮಾ: ವಾಷಿಂಗ್ಟನ್ ಡಿಸಿಗೆ ಮುಂದಿನ ತಿಂಗಳ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದು, ಈ ಸಂದರ್ಭದಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗಲು ಜನರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಕ್ವಾಡ್ ಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹಂಚಿಕೊಂಡರು. ಇದೇ ವೇಳೇ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೂ, ತಮ್ಮ ಸಿಡ್ನಿಯ ಕಾರ್ಯಕ್ರಮದ ಸ್ಥಳವು 20,000 ಜ ನರಸಾಮರ್ಥ್ಯವನ್ನು ಹೊಂದಿದ್ದರೂ ಸಹ, ಮೋದಿ ಅವರ ಕಾರ್ಯಕ್ರಮಕ್ಕಾಗಿ ತಮಗೆ ಬರುತ್ತಿರುವ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಕಷ್ಟವಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 90,000 ಕ್ಕೂ ಹೆಚ್ಚು ಜನರು ಅವರನ್ನು ಹೇಗೆ ಸ್ವಾಗತಿಸಿದರು ಎಂಬುದನ್ನು ಅಲ್ಬನೀಸ್ ನೆನಪಿಸಿಕೊಂಡರು.
ಇದನ್ನೂ ಓದಿ:Tamannaah Bhatia: ಒಂದು ಐಟಂ ಸಾಂಗ್‌ಗೆ 5 ಕೋಟಿ ಸಂಭಾವನೆ ಕೇಳಿದ್ರಾ ಮಿಲ್ಕಿ ಬ್ಯೂಟಿ?
ಇದಕ್ಕೆ ಬಿಡೆನ್ ಅವರು ಅಟೋಗ್ರಾಫ್ ಕೊಡುವಂತೆ ಮೋದಿಗೆ ತಮಾಷೆಯ ಧಾಟಿಯಲ್ಲಿ ಹೇಳಿದರು. ಈ ವರ್ಷದ ಮಾರ್ಚ್ ನಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಮೋದಿ ಮತ್ತು ಅಲ್ಬನೀಸ್ ಗುಜರಾತ್ ಸ್ಟೇಡಿಯಂಗೆ ಬಂದಿದ್ದರು.
Related Articles
ಮೂರು ರಾಷ್ಟ್ರಗಳ ಭೇಟಿಯ ಭಾಗವಾಗಿ, ಮೋದಿ ಸೋಮವಾರ ಆಸ್ಟ್ರೇಲಿಯಾಕ್ಕೆ ಆಗಮಿಸಲಿದ್ದು, ಮಂಗಳವಾರ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.