ವಾಷಿಂಗ್ಟನ್/ನ್ಯೂಯಾರ್ಕ್: ಅಮೆರಿಕದ ಸಂಸತ್, ಕಾಂಗ್ರೆಸ್‌ಗೆ ನಡೆದ ಮಧ್ಯಾಂತರ ಚುನಾವಣೆ ಯಲ್ಲಿ ಭಾರತೀಯ ಮೂಲದ ನಾಲ್ವರು ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ.
ಆಡಳಿತ ಪಕ್ಷ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಗಳಾಗಿರುವ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯ ಪಾಲ್ ಹೌಸ್ ಆಫ್ ರೆಪ್ರ ಸೆಂಟೇ ಟಿವ್ಸ್‌ಗೆ ಆಯ್ಕೆಯಾಗಿದ್ದಾರೆ.
ಗಮನ ಸೆಳೆಯುವ ಸಾಧನೆ ಎಂದರೆ ಕರ್ನಾಟಕದ ಬೆಳಗಾವಿ ಮೂಲದ ಉದ್ಯಮಿ ಶ್ರೀ ಥಾಣೆದಾರ್ ಅವರು ಮಿಚಿಗನ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅವರು ರಿಪಬ್ಲಿಕನ್ ಪಕ್ಷದ ಮಾರ್ಟೆಲ್ ಬಿವಿಂಗ್ಸ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಮಿಚಿಗನ್‌ನಿಂದ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜಾ ಕೃಷ್ಣಮೂರ್ತಿ ಇಲಿನಾ ಯ್ಸನಿಂದ 4ನೇ ಬಾರಿಗೆ, ಸಿಲಿಕಾನ್ ವ್ಯಾಲಿಯ ರೋ ಖನ್ನಾ, ಚೆನ್ನೈ ಮೂಲದ ಪ್ರಮೀಳಾ ಜಯ ಪಾಲ್ ವಾಷಿಂಗ್ಟನ್ ಪ್ರಾಂತದ ಸೆವೆಂತ್ ಕಾಂಗ್ರೆಶನಲ್ ಡಿಸ್ಟ್ರಿಕ್ಟ್ ನಿಂದ ಆಯ್ಕೆಯಾಗಿದ್ದಾರೆ.
ಮತ್ತೊಂದೆಡೆ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಕೆಳಮನೆ ಮತ್ತು ಮೇಲ್ಮನೆಯಲ್ಲಿ ಹಿಡಿತ ಸಾಧಿಸಲು ಡೆಮಾಕ್ರಾಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳು ಪೈಪೋಟಿ ನಡೆಸಿವೆ.
ಮೇರಿಲ್ಯಾಂಡ್‌ಗೆ ಭಾರತೀಯ ಮೂಲದ ಅರುಣಾ ಗವರ್ನರ್
ಅಮೆರಿಕದ ಮೇರಿಲ್ಯಾಂಡ್ ಪ್ರಾಂತಕ್ಕೆ ಮೊದಲ ಬಾರಿಗೆ ಭಾರತೀಯ ಮೂಲದ ಅರುಣಾ ಮಿಲ್ಲರ್ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಭಾರತೀಯ ಮೂಲದವರಿಗೆ ಇಂಥ ಗೌರವ ಪ್ರಾಪ್ತಿ ಯಾಗಿದೆ. ಹೈದರಾಬಾದ್‌ನಲ್ಲಿ ಜನಿಸಿದ ಅವರು ತಮ್ಮ 7ನೇ ವಯಸ್ಸಿನಲ್ಲಿಯೇ 1972ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಮಿಸೊÕàರಿ ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವೀಧರರು.