Advertisement

ಯುಎಸ್‌ ಓಪನ್‌ ಟೆನಿಸ್‌: ವಿಕ್ಟೋರಿಯಾ ಅಜರೆಂಕಾ ಗೈರು

08:20 AM Aug 23, 2017 | Harsha Rao |

ನ್ಯೂಯಾರ್ಕ್‌: ಕಟಕಟೆಯಲ್ಲಿರುವ ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಬೆಲರೂಸ್‌ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಯುಎಸ್‌ ಓಪನ್‌ ಪಂದ್ಯಾವಳಿಯಿಂದ ಹಿಂದೆ ಸರಿಯಲಿದ್ದಾರೆ. ಇದನ್ನವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
“ನ್ಯೂಯಾರ್ಕ್‌ ನನ್ನ ನೆಚ್ಚಿನ ತಾಣಗಳಲ್ಲೊಂದು. ನನ್ನ ಟೆನಿಸ್‌ ಬದುಕಿನ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ತಾಣವಿದು.

Advertisement

ಮುಂದಿನ ವರ್ಷ ಖಂಡಿತ ಮರಳುತ್ತೇನೆ…’ ಎಂದು ಅಜರೆಂಕಾ ಹೇಳಿದರು. 2012 ಮತ್ತು 2013ರಲ್ಲಿ ಅಜರೆಂಕಾ ಯುಎಸ್‌ ಓಪನ್‌ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದರು. ಆದರೆ ಎರಡೂ ಸಲ ಸೆರೆನಾ ವಿಲಿಯಮ್ಸ್‌ಗೆ ಶರಣಾಗಿದ್ದರು.

ವೈವಾಹಿಕ ಬದುಕಿನ ಜಂಜಾಟದಲ್ಲಿರುವ ಅಜರೆಂಕಾ, 8 ತಿಂಗಳ ಪುತ್ರ ಲಿಯೋ ವಿಷಯದಲ್ಲಿ ಪತಿ ಬಿಲ್ಲಿ ಮೆಕೀಗ್‌ ಜತೆ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದು ಇತ್ಯರ್ಥವಾಗದೆ ಲೊಯೋನನ್ನು ಕ್ಯಾಲಿಫೋರ್ನಿಯಾದ ಹೊರಗೆ ಕರೆದೊಯ್ಯಬಾರದು ಎಂದು ಲಾಸ್‌ ಏಂಜಲೀಸ್‌ನ್ಯಾಯಾಧೀಶರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next