Advertisement

ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಬ್ರಿಟನ್‌ ತಾರೆ ಎಮ್ಮಾ ರಾಡುಕಾನು

08:26 AM Sep 12, 2021 | Team Udayavani |

ಪ್ರತಿಷ್ಠಿತ ಅಮೆರಿಕ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು 18 ವರ್ಷದ ಬ್ರಿಟನ್‌ ನ ಯುವ ತಾರೆ ಎಮ್ಮಾ ರಾಡುಕಾನು ಗೆಲ್ಲುವ ಮೂಲಕ ಇತಿಹಾಸ ರಚಿಸಿದ್ದಾರೆ.

Advertisement

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಎದುರಾಳಿ ಕೆನಡಾದ ಲೇಲಾ ಫರ್ನಾಂಡೆಜ್‌ ವಿರುದ್ಧ 6-4, 6-3ರ ನೇರ ಅಂತರದಲ್ಲಿ ಗೆದ್ದು ಪ್ರಶಸ್ತಿಗೆ ತನ್ನದಾಗಿಸಿಕೊಂಡಿದ್ದಾರೆ.  1968ರ ನಂತರ ಅಮೆರಿಕನ್ ಓಪನ್ ಗೆದ್ದ ಬ್ರಿಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಎಮ್ಮಾ ಪಾತ್ರರಾಗಿದ್ದಾರೆ. ಅಲ್ಲದೆ 1977ರಲ್ಲಿ ವರ್ಜೀನಿಯಾ ವೇಡ್ ವಿಂಬಲ್ಡನ್ ಗೆದ್ದ ಬಳಿಕ ಸಿಂಗಲ್ಸ್ ಕಿರೀಟ ಗೆದ್ದ ಬ್ರಿಟನ್ ಆಟಗಾರ್ತಿ ಎನಿಸಿದ್ದಾರೆ.

53 ವರ್ಷಗಳ ಬಳಿಗ ಪ್ರಶಸ್ತಿ ಗೆದ್ದ ಮೊದಲ ಬ್ರಿಟನ್ ಮಹಿಳೆ ಎಂಬ ಹೆಗ್ಗಳಿಕೆಗೆ ಎಮ್ಮಾ ಪಾತ್ರರಾಗಿದ್ದಾರೆ. ಈ ಹಿಂದೆ ಎಮ್ಮಾ ರಾಡುಕಾನು ಲೇಲಾ ಫರ್ನಾಂಡೆಜ್‌, ಮಾಜಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ಸೇರಿದಂತೆ ಪ್ರಮುಖ ಆಟಗಾರ್ತಿರನ್ನು ಸೋಲಿಸುವ ಮೂಲಕ ಫೈನಲ್‌ ಗೆ ಪ್ರವೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next