ನ್ಯೂಯಾರ್ಕ್: ನೊವಾಕ್ ಜೊಕೊವಿಕ್ ಭಾನುವಾರ ಡೇನಿಯಲ್ ಮೆಡ್ವೆಡೆವ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ತಮ್ಮ ನಾಲ್ಕನೇ ಯುಎಸ್ ಓಪನ್ ಮತ್ತು ದಾಖಲೆಯ 24 ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದು ಎರಡು ವರ್ಷಗಳ ಹಿಂದೆ ಫೈನಲ್‌ನಲ್ಲಿ ರಷ್ಯಾದ ವಿರುದ್ಧ ಸೋತ ಸೇಡು ತೀರಿಸಿಕೊಂಡಿದ್ದಾರೆ.
ಈ ಮೂಲಕ ಓಪನ್ ಎರಾದಲ್ಲಿ ಅತಿ ಹೆಚ್ಚು ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 6-3, 7-6 (7-5), 6-3 ಅಂತರದಿಂದ ಡೇನಿಲ್ ಮಡ್ವೆಡೇವ್ ಅವರನ್ನು ಮಣಿಸಿ ಈ ಸರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಮೆಡ್ವೆಡೆವ್ 2021 ರ ಫೈನಲ್‌ನಲ್ಲಿ ಜೊಕೊವಿಕ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದರು. ಮೂರು ಗಂಟೆ 16 ನಿಮಿಷಗಳ ಕಾಲ ನಡೆದ ಈ ಸೆಣೆಸಾಟದಲ್ಲಿ ಸರ್ಬಿಯಾದ ದಂತಕಥೆ ತನ್ನ ವೃತ್ತಿಜೀವನದ 36ನೇ ಫೈನಲ್‌ನಲ್ಲಿ ಆಡಿ 24 ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
ತನ್ನ 10 ನೇ ಯುಎಸ್ ಓಪನ್ ಫೈನಲ್‌ನಲ್ಲಿ ಆಡಿದ ಜೊಕೊವಿಕ್ ಆರಂಭಿಕ ಮೇಲುಗೈ ಸಾಧಿಸಿದ್ದರು. ಆರಂಭದಲ್ಲಿ 3-0 ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಅದಾದ ಬಳಿಕ ಅನುಭವಿ ಆಟಗಾರ ಹಿಂತಿರುಗಿ ನೋಡಲಿಲ್ಲ. 48 ನಿಮಿಷಗಳಲ್ಲಿ ಮೊದಲ ಸೆಟ್ಟನ್ನು ಅಂತ್ಯಗೊಳಿಸಿದರು. ಎರಡನೇ ಸೆಟ್‌ನಲ್ಲಿ ಅತ್ಯಂತ ಜಿದ್ದಾಜಿದ್ಗದಿನ ಹೋರಾಟ ಕಂಡು ಬಂದಿತ್ತು. ಇನ್ನು ಕೊನೆಯ ಸೆಟ್ಟನ್ನು ಕೂಡ ಜೊಕೊವಿಕ್ ತನ್ನ ವಶಕ್ಕೆ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಆಧುನಿಕ ಟೆನಿಸ್ ಜಗತ್ತಿನಲ್ಲಿ ಸೆರೆನಾ ವಿಲಿಯಮ್ಸ್ (23 ಸಿಂಗಲ್ಸ್ ಟ್ರೋಫಿ) ಅವರ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಿನ ದಾಖಲೆ ಮುರಿದ ನೊವಾಕ್, ಸಾರ್ವಕಾಲಿಕ ಅತಿ ಹೆಚ್ಚು ಗ್ರ್ಯಾಂಡ್ ಸ್ಯಾಮ್ ಗೆದ್ದಿರುವ ಅಮೆರಿಕದ ಮಾರ್ಗರೇಟ್ ಕೋರ್ಟ್ (24 ಸಿಂಗಲ್ಸ್ ಟ್ರೋಫಿ) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದನ್ನೂ ಓದಿ: Canadian PM: ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಯಲ್ಲೇ ಉಳಿದುಕೊಂಡ ಕೆನಡಾ ಪ್ರಧಾನಿ